ನೋವಾದರೂ
ನಲಿವಾದರೂ
ನೀನೇನೆ ಎಲ್ಲಾ ನನಗೆ
ಮುಚ್ಚು ಮರೆಯಿಲ್ಲದೆ
ಹುಚ್ಚಿಯಂತೆ ಒಮ್ಮೊಮ್ಮೆ
ಬಿಚ್ಚಿಡುವೆ ಎಲ್ಲವೂ ನಿನ್ನಲ್ಲಿ
ಅಳು ಬಂದರೂ
ಸಿಟ್ಟಾದರೂ
ನಿನ್ನನ್ನು ಬಿಟ್ಟು ಯಾರಿದಾರೆ
ಆಗಾಗ ಒದಗದೆಯಾಗಿಸಿದೆ
ಕೆಲವೊಮ್ಮೆ ಮುದ್ದೆ ಮಾಡಿ
ಮೂಲೆಗೆಸೆದಿರುವೆ
ಇದುವರೆಗೂ ನಿನ್ನ ನೋವೆನೆಂದು ಕೇಳದೆ
ಗೀಚಿಡುವೆ ನನಗನಿಸಿದ ಎಲ್ಲಾ
ಕ್ಷಮಿಸಿಬಿಡು
ಬಿಳಿ ಹಾಳೆ ಗೆಳೆಯ
ನನ್ನವರು ಅಂತ ನನಗ್ಯಾರಿಲ್ಲ
ನಿನ್ನವಿನಹ
.......
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ