ಸೋಮವಾರ, ನವೆಂಬರ್ 24, 2014

ಕಾಲಿನ ಕಾಡೆ ನೊಡುವಾಗ

ಇವತ್ತು ಯಾಕೋ ಕಾಲಿನ ಕಡೆ ನೋಡ್ತಾ ಇರುವಾಗ ಬೆತ್ತಲೆ ಪಾದಗಳು ನೆನಪಾದವು.
ಹೌದಲ್ಲಾ ...ಬರಿಗಾಲಲ್ಲಿ ನಡೆದು ಎಷ್ಟೊಂದು ದಿನವಾಯ್ತಲ್ಲ
ನಡಿಯೊಣ ಅಂತ ಚಪ್ಪಲಿ  ಬಿಟ್ಟು  ಬರಿಗಾಲಲ್ಲಿ ನಡೆದೆ.
ಮೊದಲು ಮಣ್ಣು ಕೂಡ ಚುಚ್ಚಿ ದಂತೆ ಎನಿಸಿದರೂ  ನಂತರ ಹೊಂದಿಕೊಂಡ್ತು
ಮಣ್ಣು, ಕೆಸರು,ಮಳೆಯ,ನೀರಿನ ತಂಪು
ಹುಲ್ಲಿನ ಕಚಗುಳಿ
ಕಾಣದ ಸಣ್ಣ. ಮುಳ್ಳಿನ. ಚುಚ್ಚುವಿಕೆ
ಓಹ್ ಎಲ್ಲಾ ಅದೆಷ್ಟು  ಹಿತವೆನಿಸುತ್ತಿದೆ
ಇದನ್ನೆಲ್ಲಾ ಯಾಕೆ ಇಷ್ಟು  ದಿನ ಮರೆತೆ
ನನ್ನನ್ನೇ ನಾನು ಬಯ್ದು ಕೊಂಡೆ.
ಆ ದಿನಗಳು ...
ಚಪ್ಪಲಿಯಿಲ್ಲದ ದಿನಗಳು ನೆನಪಾದವು
ಹಾಗೆ ಚಪ್ಪಲಿ ಇಲ್ಲದೆ ನಡೆಯುವಾಗ ಮುಳ್ಳು (ಜಾಲಿ) ತಿಳಿದಿದ್ದು ನೆನಪಾಯ್ತು
ಈ ಮುಳ್ಳು ಮುರಿತದಲ್ಲೂ ವಿಧಗಳಿವೆ
ಹಸಿಜಾಲಿ (ಬಳ್ಳರಿ) ತುಳಿದ್ರೆ ಅದು ಕಾಲಲ್ಲಿ ಮುರಿಯೋದಿಲ್ಲ
ಆದರೆ ಆ ನೋವಿದೆಯಲ್ಲ  ಅಬ್ಬಾ  ಅದನ್ನ ಅನುಭವಿಸಿಯೇ ತೀರಬೇಕು.
ಕಾಲು ಎತ್ತಿಡಲೂ ಸಾಧ್ಯವಾಗೋದಿಲ್ಲ. ಗೊತ್ತಾ?
ಮೂರು ದಿನ ಬೇಕು ಸರಿಯಾಗಿ ಓಡಾಡ್ಲಿಕ್ಕೆ
ಇನ್ನು  ಕೊಳೆತ ಜಾಲಿಮುಳ್ಳು ತುಳಿದ್ರಂತೂ ಕಮ೯
ಕಾಲಲ್ಲಿ ಮುಳ್ಳು ಮುರಿಯೋದಂತೂ ಗ್ಯಾರಂಟಿ
ಜೊತೆಗೆ ನೋವು ಮತ್ತು ಕಾಲಿಟ್ಟಾಗಲೆಲ್ಲಾ ಈಟಿಯಿಂದ ಅಂಗಾಲಿಗೆ ಚುಚ್ಚಿದಂತೆ ಅನುಭವ,ಅದನ್ನು  ಬಗೆದು ತೆಗೀಲಿಕ್ಕು ಬರೋದಿಲ್ಲ,ಸ್ವಲ್ಪ. ಬಗೆದು ಕಳ್ಳಿ ಅಥವಾ ಎಕ್ಕೆ ಅಥವಾ ಕಿವಿಯಲ್ಲಿನ ಕಸವನ್ನು ತೆಗೆದು ಅಥವಾ ಎಮ್ಮೆ ಸಗಣಿಯನ್ನು  ಕಟ್ಟಿ  ಅದು ಕೀವಾಗುವುದನ್ನು  ಮೂನಾ೯ಲ್ಕು  ದಿನ ಕಾದು  ಬಗೆದು ತೆಗೆದಾಗ ನಿಜಕ್ಕೂ  ಸ್ವಗ೯ ಸುಖ. ಬಗೆಯುವವರ ಕೈಯಲ್ಲಿ  ಕಾಲು ಕೊಟ್ಟು  ಹಲ್ಲು  ಕಚ್ಚಿ  ಹಿಡಿದು (ಒಮ್ಮೊಮ್ಮೆ  ಬಟ್ಟೆ  ಕಚ್ಚಿ)
ಬಗೆಸಿಕೊಳ್ಳೋದು  ಮಸ್ತ. ಮಜ
ಹಾಗೆಯೇ ಮುಳ್ಳು  ಬಗೆಯೋದು ಕೂಡ ಒಂದು ಕಲೆ
ಮುಳ್ಳು  ಹೊಕ್ಕವರ ಗಮನವನ್ನು  ಬೇರೆಡೆಗೆ ತಿರುಗಿಸಿ ನಿಧಾನಕ್ಕೆ  ಬಗೀಬೇಕು, ಮುಳ್ಳು  ಬಗೆಯಲು ಬಳಸುವ ಸಾಧನಗಳುಲ್ಲೂ  ವೈವಿಧ್ಯತೆಯಿದೆ
ಮುಳ್ಳನ್ನ. ಮುಳ್ಳಿ ನಿಂದಲೇ ತೆಗೀಬೇಕಲ್ಲ, ಸೂಜಿ, ಪಿನ್ನು, ಮುಳ್ಳಗಡಿ ಹೀಗೇ
ಆ ಅನುಭವಗಳೇ ಅಂತಹವು, ಕಾಲು ತುಂಬೆಲ್ಲಾ ತೂತುಗಳೇ ಇತಿ೯ದ್ದವು
ಈಗ ಬರೀ ಗಾಲು ನುಣ್ಣನೇ ಖಾಲಿ ಕಾಲು..........
ಆ ದಿನಗಳೇ ಬೇರೆ ಅಲ್ವಾ ....

ಶನಿವಾರ, ನವೆಂಬರ್ 8, 2014

ಗೊತ್ತಿಲ್ಲ ದ ರುಚಿ

> ಈ ಎರಡರಲ್ಲಿ  ನಮಗೆ ಮುಖ್ಯವಾದ್ದದು
> ಯಾವುದು, ಹಣ, ಬುದ್ಧಿ ವಂತಿಕೆ
> ನಿನ್ನ. ಹತ್ತಿರ ಒಂದು ಹತುಸಾವಿರ ಕೂಡ ಇಲ್ಲ ವ. ಅಂತ ಕೇಳೋ ಪ್ರಶ್ನೆ ಗೆ ನೋವಾಗುತ್ತದೆಯೆ ಹೊರೆತು ನಮ್ಮಲ್ಲಿ  ನೂನ್ಯತೆಯನ್ನು  ಹುಟ್ಟಿ ಸೊಲ್ಲ.
> ಅದೇ ಅಯೋ ಇಷ್ಟು  ಚಿಕ್ಕ. ಪ್ರಶ್ನೆ ಗೆ ಕೂಡ ನಿನಗೆ ಉತ್ತರ ಗೊತಿಲ್ಲವ ಅಂತ ಯಾರದರೂ ಅನಗಿಸಿದ್ದರೆ ಮಾತ್ರ.   ನಮ್ಮ. ರಕ್ತ ಸಂಚಾರವೆ ಸ್ಥಗಿತಗೊಳುತೆ.
> ಬುದ್ಧಿ ವಂತಿಕ್ಕೆಗೆ ಮನುಷ್ಯ. ಕೊಡುವ ಸ್ಥಾನ ಅಂತಹದ್ದು
> ಆದರೆ ನೋಡಿ ನಿಜವಾಗಲು ನಮ್ಮ ಗೆನು ಗೊತ್ತು, ಹಾಗೆ ಗೊತ್ತಿದ್ದರೂ ಅದು ಯಾವುದ್ದರ ಬಗ್ಗೆ ಗೊತ್ತು  ಅದು ಎಷ್ಟ ರ ಮಟ್ಟಿಗೆ. ಯಾರದ್ದರೂ ನಮಸ್ಕರಿಸಿದರೆ ಯಾಕೆ ಮಾಡಿದ್ದರು ಅಂತ ಗೊತ್ತ. ಇಲ್ಲ. ಬೆರೆಯಾವರು ಯಾಕೆ ಹಾಗೆ ಮಾಡತ್ತಿಲ ಅಂತಲಾದ್ದರೂ ಗೊತಾಗೊ ಬುದ್ಧಿ ವಂತಿಕ್ಕೆ ಇರಬೇಕು
> ಒಬ್ಬರು ಒಬ್ಬರನ್ನ ಯಾಕೆ ಅಷ್ಟು  ತೀವ್ರವಾಗಿ  ದ್ವೇಷಿಸುತ್ತಾರೆ,ಹಾಗೆಯೆ ಇನೊಬ್ಬರ ಮೇಲೆ ಯಾಕೆ ಅಷ್ಟು  ಅನೂಹ್ಯವಾದ ಪ್ರೀತಿ  ಬೆಲೆಸಿಕೊಲುತ್ತಾರೆ.
> ಕೆಲವರ ಕರೆನ್ಸಿ  ನೋಟ್ಟುಗಳಿಗೆ  ಟ್ವಿನ್ಸ,ಟ್ರಿಪ್ಲೆಟ್ಸ,ಹುಟ್ಟು ತಿದ್ದರೆ ಇನ್ನೂ ಕೆಲವರ ನೊಟ್ಟುಗಳು  ಬಂಜೆ ನೋಟ್ಟುಗಳಾಗಿದ್ದು  ಒಂದು ಹುಟ್ಟೊಲಾ ಹಾಗೆ ಯಾಕೆ ಅಂತ ಗೊತ್ತೆ ಆಗೊಲ್ಲ.
> ಟೈಪಿಂಗ್,ಕರಾಟೆ, ಡೆಕರೆಷನ್, ಎಲಕ್ಟ್ರಿಕಲ ವಕ್೯,ವ್ಯವಸಾಯ, ಅರ್ಥಶಾಸ್ತ್ರ ,,ಸಾಹಿತ್ಯ
> ಬೆಂಕಿ, ನೀರೂ ಹೀಗೆ ಇವೆಲ್ಲವೂ ಎಲ್ಲಿಂದ ಬರುತ್ತಿವೆ
> ಈ ಭೂಮಿ ಹೀಗೆ ಯಾಕೆ ಇದೆ ಹೀಗೆ ಕೊಟ್ಯನು ಕೋಟಿ  ಅಂಶಗಳಲ್ಲಿ ಒಬ್ಬರಿಗೆ ಒಂದು ಗೋತ್ತಾದ್ದರೆ ಮತ್ತೊಬ್ಬರಿಗೆ  ಇನ್ನೊಂದು.
> ಗೊತಿರುವುದಕ್ಕೂ  ಗೊತಾಗದೇ ಇರುವುದಕ್ಕೂ  ವೆತ್ಯಾಸ ಸ್ವಲ್ಪ ನೆ  ಅದೊಂದು ಚಿಕ್ಕ ರೇಖೆ ಅಷ್ಟೇ,
> ಒಂದು ಹೆಜ್ಜೆ  ಆ ಕಡೆ  ಹಾಕಿದರೆ ಗೊತ್ತು ಹಾಕಿಲ್ಲ. ಅಂದರೆ ಗೋತಿಲಾ ಇಂತಹ ಹೆಜ್ಜೆ  ಹಾಕಿ ಅವಕಾಶ ಮನುಷ್ಯ. ಮನುಷ್ಯನಿಗೂ ಬದಲಾಗುತಿರುತ್ತದೆ.
> ಆದರೂ ನೋಡಿ  ಮನುಷ್ಯ. ತುಂಬ ಸಲ. ತಾನೊಬ್ಬ ಙ್ಞಾನಿ  ಅನೋ ಮುದ್ರೆಯನ್ನು  ಹಾಕೊಬೇಕು ಅಂತ ಪ್ರಯತ್ನಿಸುತಿರುತ್ತಾನ.
> ಅಷ್ಟ�
>

ಬುಧವಾರ, ಅಕ್ಟೋಬರ್ 29, 2014

ನಿರೀಕ್ಷೆ

> ನಿರೀಕ್ಷೆ
> ~~~~~~
> ಕೊಡವದಿರಿ ನನ್ನ. ದುಪ್ಪಟೆಯನ್ನು  ಅದರಲ್ಲಿ
> ರಾತ್ರಿ ಹೆಣೆದ ಕನಸುಗಳ ರಾಶಿ ಇದೆ
> ಚೆಲ್ಲಿ ಛಿದ್ರವಾಗಿ ನಲುಗಿ ಹೋಗುತ್ತವೆ
> ಅವು ಭಾವದ ಕಾವಿನಲ್ಲಿ
> ಕಂಗಳ ಗೂಡಿನೊಳಗೆ
> ಕಣ್ತೆರೆಯುವ ಹಸಿ ಕನಸುಗಳು
>
> ಕೊಲ್ಲದಿರಿ ಕೊಡವದಿರಿ ಜೋರಾಗಿ, ಜೋಕೆ ಜಾರಿ ಹೋಗಿ,ಬರದಿರಬಹುದು ಮತ್ತೆ
> ಬಿಟ್ಟು  ಹೋದ ಈ ಗೂಡಿನೊಳಗೆ
> ಧೂಳಿದ್ದರೇನು ಆ ಧೂಳಿನ ತುಂಬಾ ನನ್ನ.
> ಕನಸುಗಳ ಕಂಪು ಹರಡಿದೆ
>
> ಚೆಲ್ಲಿದ ಕನಸುಗಳನ್ನು  ಒಟ್ಟು  ಮಾಡಿ ಮನದ ಮೂಲೆಯಲ್ಲಿ ರಾಶಿ ಹಾಕಿ
> ಮತ್ತೆ ರಾತ್ರಿಯ. ತಂಪಿನಲ್ಲಿ
> ಕಾವು ಕೊಡುತ್ತೆನೆ
> ಬೆಚ್ಚಗಿಡುತೇನೆ ಜೋಪಾನ
> ಮಾಡುತೇನೆ
>
> ಮಧ್ಯರಾತ್ರಿಯ ಮಬ್ಬುಗತ್ತಲಿನ ಮಡಿಲಲ್ಲಿ
> ಚುಕ್ಕಿಗಳ. ಹೊಳಪನ್ನು  ನಾಚಿಸುವಂತೆ
> ಕಣ್ಣು  ಬಿಡಬಹುದು ಒಮ್ಮೆ
> ನನ್ನ. ಈ ಕನಸ್ಸುಗಳು
> ಎಂಬ ನಿರೀಕ್ಷೆ ಯಲ್ಲಿ.
> ....
> ಆಸಾದೀಪಾ

ಭಾನುವಾರ, ಅಕ್ಟೋಬರ್ 26, 2014

ಸ್ಕಿಝೋಪ್ರೋನಿಯ


ಸುಜಿ ಏನ ಮಾಡುತ್ತಿದ್ದಿಯ ಒಬ್ಬಳೇ  ಯಾರ ಜೊತೆ ಮಾತಾಡುತ್ತಿದ್ದಿಯ, ಊಹುಂ ಅವಳಿಗೆ ಕೆಳಿಸಲೇ ಇಲ್ಲ
ಅವಳು ಮಾತಾಡುತ್ತದ್ದಾಳೆ, ನಗುತ್ತಲೇ ಇದ್ದಾಳೆ ಅವಳೆದುರು ಮಾತ್ರ. ಯಾರು ಇಲ್ಲ ಕರೆದುಕೊಂಡು ಬಂದು ಕೂರಿಸಿ ನೀರು ಕುಡಿಸಿ ಊಟಮಾಡಿಸಿದೆ, ಯಾಕೋ ತುಂಬ ಮಂಕಾಗಿದ್ದಾಳೆ  ಆಗಗ ಭಯ ಪಡುತ್ತಿದ್ದಾಳೆ
ಏನಾದರೂ ನೊಡಿ ಹೆದರಿರಬೇಕು, ಸರಿ ಎರಡು ದಿನ ಬಿಟ್ಟರೆ ಸರಿ ಆಗತ್ತಾಳೆ ಅಂತ ಸುಮ್ಮನಾದೆ.
ನನ್ನ. ಒಬ್ಬಳೇ ಮಗಳು sslc ಮುಗಿಸಿ pu ಗೆ ಹೊಗತ್ತಿದ್ದಾಳೆ, ಗಲಗಲ ಮಾತಾಡುತ್ತಾ ಮನೆಯ ತುಂಬಾ ಓಡಾಡುತ್ತಿದ್ದ ಇವಳು ಹೀಗೆ ಆಚನಾಕಾಗಿ ಮಂಕು ಬಡಿದಂತೆ ಸುಮ್ಮನಿದ್ದರೆ ನೊಡಿ ಸಂಕಟವಾಗಿತ್ತಿತು.
ಎಷ್ಟೇ  ಹೇಳಿದ್ದರೂ ಮಲಗುತ್ತಿಲ್ಲ ಬಲವಂತವಾಗಿ ಮಲಗಿಸಿದೆ ಇಡೀ ರಾತ್ರಿ ಕಣ್ಣ ಬಿಟ್ಟುಕೊಂಡು ಮಲಗಿರುತ್ತಾಳೆ, ಕಾಲೇಜಿಗೆ ಹೋಗುತ್ತಿಲ್ಲ, ನಾನು ಕೆಲಸಕ್ಕೆ ಹೊಗಿ ಬರೊ ಅಷ್ಟರಲ್ಲಿ ಮನೆ ತುಂಬಾ ಗಲೀಜು ಮಾಡಿ ಕೋಪದಿಂದ ಕೂಗಾಡುತ್ತಿದ್ದಾಳೆ  ಆದರೆ ಅಲ್ಲಿ ಯಾರು ಇಲ್ಲ, ಅವಳನ್ನು  ನಿಯಂತ್ರಿಸಲು ತುಂಬಾನೇ ಕಷ್ಟ ಆಯ್ತು.
ಯಾರಿಗಾದರೂ  ಹೇಳೊಕೆ ಭಯ, ವಯಸ್ಸು ಹುಡುಗಿ ಮುಂದೆ ಮದುವೆ ಗಿದುವೆ ಅಂದರೆ ಕಷ್ಟ ಆಗುತ್ತೆ  ಅನಿಸಿತು, ಸರಿ ಇನ್ನೆರಡು ದಿನ. ನೋಡೋಣ ಅನಕೊಂಡೆ
ಸತ್ತುಹೊಗಿರೊ ನಮ್ಮ ತ್ತೆ  ಬಂದು ಅವಳನ್ನು ಕರೆಯುತ್ತಿದ್ದಾಳೆ ಅಂದಳು ಆ ಮಾತ್ತು ಕೇಳಿ ತುಂಬಾನೇ ಭಯ ಆಗಿತ್ತು  ಸತ್ತ ಮೇಲೂ ನಮ್ಮನೂ ನೆಮ್ಮದಿಯಾಗಿರೊಕ್ಕೆ  ಬಿಡತ್ತಿಲ್ಲ
ನನ್ನ. ಮಗಳ ಮೈ ಮೇಲೆ ಬಂದು ಕಾಡುತ್ತಿದ್ದಾಳೆ ಚೇನಾಗಿದ್ದ. ಮಗು ಹಿಗಾಗಿದು ನಮ್ಮತ್ತೆ ಯಿಂದನೆ. ಅಂತ ಯೊಚಿಸಿ ಗಾಳಿ ಆಂಜನೇಯನ ದೇವಸ್ಥಾನಕ್ಕೆ ಹೋಗಿ ತಾಯತ್ತು ಕಟ್ಟಿಸಿದ್ದೆ ಪೂಜೆಯನ್ನು ಮಾಡಿಸಿದೆ, ಮಗಳು ತುಂಬಾ ಸುಸ್ತಾದಂತೆ ಇದ್ದಳು,ಇವತ್ತು ದೈರ್ಯವಾಗಿ ಮನೆಗೆ ಬಂದವಿ, ಅವಳು ಕೂಡ ಗಲಾಟೆ ಮಾಡದೇ ನೆಮ್ಮದಿ ಯಾಗಿ ಮಲಗಿದ್ದಳು ಅಂತು ನಮ್ಮತೆ ಹೊದಳು ಇನೂ ಎಲ್ಲಾ ಸರಿ ಆಗುತ್ತದೆ, ತಾಯತು ಕೆಲಸ ಮನಾಡುತ್ತಿದೆ ಅಂತ ಖುಷಿಯಾಗಿ ಕೆಲಸಕ್ಕೆ  ಹೊದೆ ಬರುವಾಗ ದಾರಿಯಲ್ಲಿ ನಿಮ್ಹಾನ್ಸ್ನಲಿ ಕೆಲಸ ಮಾಡುವ ಗೆಳತಿ ಸಿಕ್ಕಳು ತುಂಬಾ ಮಾತನಾಡಿದವಿ ಮಗಳ ಬಗ್ಗೆ ಹೇಳಿದೆ ತಾಯತೆಲ ಬೇಡ ನಮ್ಮ. ಆಸ್ಪತ್ರೆಗೆ ಕರಕೊಂಡು ಬಾ ಸರಿ ಆಗುತೇ ಅಂದಳು ಸರಿ ಅಂದೆ ಆದರೆ ಧೈಯ೯ ಬರಲಿಲ್ಲ. ,ಅವಳ ಭವಿಷ್ಯದ ನೆನಪಾಗಿ ಸುಮ್ಮನಾದೆ
ಮಾರನೆ ದಿನ ಮನೆಗೆ ಬರುವಷ್ಟರಲ್ಲಿ ಅಬ್ಬಾ ನೊಡೊಕ್ಕೆ ಆಗದ ಹಾಗೆ ಬಟ್ಟೆ ಯೆಲ್ಲ ಬಿಚ್ಚಿ ನಗ್ನವಾಗಿ ಕನ್ನಡಿಯೆದುರು ಕುತು ಅಲುತ್ತಿದ್ದಾಳೆ, ನನ್ನ ನೊಡಿ ಅಮ್ಮ. ಮುಖದ ತುಂಬಾ ಹುಣ್ಣು  ,ಗಾಯ, ಕೀವು
ರಕ್ತ. ಸೊರುತ್ತಿದ್ದೆ ಎಂದಳು, ಅತಿ ಬಲವಂತವಾಗಿ ಬಟ್ಟೆ ಹಾಕಿ ಏನಿಲ್ಲೆಂದರೂ ಒಪ್ಪಲಿಲ್ಲ ಕೋಪ ತಡಿಯಲಾರದೆ  ಚೇನಾಗಿ ಒಡೆದು ಮಲಗಿಸಿದೆ ಇಷ್ಷಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಧೈರ್ಯ ಬರಲಿಲ್ಲ  ಹುಚ್ಚಿ  ಅನೊ ಹಣೆಪಟ್ಟಿ  ಬಿದ್ದರೆ ಮುಂದೆ ಅವಳ ಭವಿಷ್ಯ. ಹೇಗೆ ಅನಕೊಂಡೆ
ಒಂದು ವಾರ ರಜೆಹಾಕಿ  ಅವಳನ್ನು  ನೋಡಿಕೊಂಡೆ ಸ್ವಲ್ಪ. ಸಮಾದಾನವಾಗೆ ಇದ್ದಳು, ಮಂಕಾಗಿದ್ದರು ಸರಿ ಆಗತ್ತಾಲೆ ಅನಕೊಂಡು ಕೆಲಸಕ್ಕೆ ಹೊದೆ ಹೊಟ್ಟೆ ಪಾಡು ಹೊಗಲೇ ಬೇಕು,
Office ನಿಂದ ಮನೆಗೆ ಬರೋ ಅಷ್ಟರಲ್ಲಿ ಕತ್ತಿಯಿಂದ ಮುಖ, ಕೈ,ಕಾಲು, ಗಾಯ ಮಾಡಿಕೊಂಡು ಪ್ರಾಣಕ್ಕೆ ಹೊರಾಡುವ ಸ್ಥಿತಿಯಲ್ಲಿ ಬಿದ್ದಳು,ಪಕ್ಕದಲ್ಲೇ ಇದ್ದ ಆಸ್ಪತ್ರೆಗೆ  ಸೇರಿಸಿದ್ದವಿ,ಒಂದೂ ವಾರದ ನಂತರ ಅವರೂ ನಿಮ್ಹಾನ್ಸ್ ಗೆ ಕರೆದುಕೊಂಡು ಹೊಗಲು ಹೇಳಿದ್ದರೂ, ನಾನು ಒಪ್ಪಲಿಲ್ಲ. ಹುಚ್ಚಾಸ್ಪತ್ರೆಗೆ ಮಾತ್ರ.   ಬೇಡ ಸರ್ ಏನ ಟ್ರಿಟಮೆಂಟ್ ಬೇಕಾದರೂ ಇಲ್ಲೆ ಕೊಡಿ ಎಂದೆ ಅದಕ್ಕವರೂ "ಮೈ ಗಾದ ಗಾಯಗಳಿಗೆ  ನಾವು ಔಷಧಿ ಹಾಕುತ್ತಿವಿ, ಅವಳ ಮನಸ್ಸಿಗಾದ ಗಾಯಕ್ಕೆ "ನಿಮ್ಹಾನ್ಸ್ ನಲ್ಲೆ  ಚಿಕಿತ್ಸೆಯ ಕೊಡಿಸಲೇ ಬೇಕು  ,ಜ್ವರ. ಕೆಮ್ಮು ನೆಗಡಿ  ಬರೋ ಹಾಗೆನೆ  ಮನಸ್ಸುಗೂ ಜ್ವರ ಬರುತ್ತದೆ "ಜನ ಏನೂ ಅನುತ್ತಾರೊ ಅನೊ ಯೊಚನೆಯ ಬಿಡಿ ಇಲ್ಲಿ ನಿಮ್ಮ ಮಗಳ ಪ್ರಾಣ ಮುಖ್ಯ.ಈಗ ನೀವು ಮನೆಗೆ ಕರೆದು ಕೊಂಡು ಹೋದರೂ ಮತ್ತೆ ಅದೇ ತರಹ ಮಾಡಿಕೊಳುತ್ತಾಳೆ ಏಂದು ಖಚಿತವಾಗಿ ಹೇಳಿದ ಮೇಲೆ ಅಂಜಿಕೆಯಿಂದನೇ ಆಸ್ಪತ್ರೆಗೆ ಕರೆದುಕೊಂಡು ಬಂದೆ ಅಲ್ಲಿ ನಮ್ಮಂತಹವರು ತುಂಬಾ ಜನ ಇದ್ದರೂ, ಅಂದರೆ ಇದು ಸಾಮಾನ್ಯ. ಖಾಯಿಲೆನೆ ಅನಕೊಂಡೆ, ಆದರೂ ಎಷ್ಟು  ಖಚು೯ ಆಗುತೊ ಬಡವಳು, ವಿದವೆ,ಕೂಲಿ ಕೆಲಸ ಮಾಡುವ ನಾನು ಲಕ್ಷ ಲಕ್ಷ ಎಲ್ಲಿಂದ. ತರಲಿ ಅನಕೊಂಡೆ,ಕ್ಯೂನಲ್ಲಿದಾಗ ನಮ್ಮ. ಹೆಸರನ್ನು ಕರೆದರು ಹೊದವಿ ಕುತ್ತಿರುವ ಹುಡುಗ ನೆ ಡಾಕ್ಟರ್ ಅಂತ ಗೊತಾಯಿತು ಅವನು ಕೆಳಿದು ನಮಗೆ ಗೊತ್ತಾಗಲಿಲ್ಲ. ನಮ್ಮ. ಭಾಷೆ  ಅವನಿಗೆ ಗೊತಗಲಿಲ್ಲ
ಫೋನ್ ಮಾಡಿ ಯಾರನೊ ಕರೆದರೂ
ನಗುಮೊಗದ ಸ್ನೇಹ ಸೂಸುವ ಕಂಗಳ ಇನೊಬ್ಬ ಡಾಕ್ಟರ್ ಬಂದರೊ ಚಿಕ್ಕ. ವಯಸ್ಸಿನ ಈ ಹುಡುಗ ನಮಗೆ ಹೇಗೆ ಸಹಾಯ ಮಾಡುತ್ತಾರೆ ಅಂದುಕೊಂಡವಿ ಬರುತ್ತಿದ್ದ. ಹಾಗೆನೆ ಅಮ್ಮ. ನನ್ನ. ಹೆಸರೂ "ಡಾ ಉಮೇಶ್ " ತಿಂಡಿ ಎಲ್ಲಾ  ಆಯ್ತ ಅಂತ ವಿಚಾರಿಸಿದಾಗ ನೆಮ್ಮದಿ ಅನಿಸಿತು  ಕೇಳಿದ ರೀತಿಗೆ ಸಂತೋಷ, ದುಃಖ ಎರಡೂ  ಒಟ್ಟಿಗೆ ಆಯ್ತು ಎಲ್ಲವನ್ನೂ ವಿವರವಾಗಿ ಹೇಳಿದೆ, ಭಯ ಬೇಡ ಸ್ವಲ್ಪ. ದೀನ ಇಲ್ಲೆ ಇರಲಿ ಎಂದರೂ,ಮಾತ್ರೆ, ಚಿಕಿತ್ಸೆ  ಎಲ್ಲಾ ಸರಿಯಾಗಿ ಆಗುತ್ತಿತು ಈಗ ನನಗೆ ನಂಬಿಕೆ ಬರುತ್ತಿತ್ತು ನನ್ನ ಮಗಳು  ಸರಿ ಆಗುತ್ತಾಳೆ ಎಂದು, ಮೊದಲಿಗಿಂತ ಶಾಂತಿಯಿಂದ ಇರುತ್ತಿದ್ದಾಳೆ, ನಮ್ಮ. ದೇವರಂತ ಡಾಕ್ಟರ್  ಉಮೇಶ್ ದಿನಕ್ಕೆ ಎರಡು ಬಾರಿ ಬರುತ್ತಿದ್ದರೂ  ಹಾಗೆ ಬಂದಾಗ ಬಿಲ್ ಬಗ್ಗೆ ಕೇಳಿದೆ ನನ್ನ ವಿಷಯವನ್ನು ಹೇಳಿದೆ  ಸಂಬಂಧಿಸಿದ ಪತ್ರಗಳನ್ನು ಕೇಳಿದ್ದರೂ ಎಲ್ಲವೂ  ತಂದು ಕೊಟ್ಟೆ  ಬಿಲ್ ಹಣವನ್ನು ಕಡಿಮೆಯಲ್ಲಿ ಮಾಡಿಕೊಟ್ಟರು  ಈಗ ತುಂಬಾನೆ ಧೈರ್ಯ ದಿಂದ ಚಿಕಿತ್ಸೆ ಕೊಡಿಸುತ್ತಿದ್ದೆನೆ, ಅವಳ "ಕಾಯಿಲೆ ಮೆದುಳಿನ ನರ ದೌಬ೯ಲ್ಯ " ಎಂದರೂ ಅದಕ್ಕೆ "ಸ್ಕಿಝೊಪ್ರೋನಿಯ" ಎಂದರೂ ಮಾತ್ರೆಗಳನ್ನೂ  ಕ್ರಮ ತಪದೆ ಕೊಡಲು ಹೇಳಿದ್ದರೂ ,ಸಾಕಷ್ಟು, ನಿದ್ರೆ, ವಿಶ್ರಾಂತಿ, ತೆಗೆದುಕೊಳುವಂತೆ ನೊಡಿಕೊಳುತ್ತಿದೆ ನಮ್ಮ. ಡಾಕ್ಟರ್  ಉಮೇಶ್ ಅಂತು ತಂಬಾನೆ ಸಹನೆಯಿಂದ ನೊಡಿಕೊಳುತ್ತಿದ್ದರೂ ಅವಳಾಡುವ ಮಾತು ಹಟಕ್ಕೆ ನನ್ನಗೆ ಕೊಪ ಬರುತ್ತಿತು ನಮ್ಮ. ಡಾಕ್ಟರ್ ಗೆ ಮಾತ್ರ. ಕೊಪವೆ ಬರುತಿರಲಿಲ್ಲ ತುಂಬಾ ಶಾಂತಿ ಸಹನೆಯಿಂದ. ನಡೆದುಕೊಳುತ್ತಿದ್ದರೂ, ಅವಳ ಕೆಲಸವನ್ನೂ  ಅವಳೆ ಸ್ವತಹ ಮಾಡಿಕೊಳುವಂತೆ ಪ್ರೋತ್ಸಾಹಿಸುತ್ತಿದ್ದರೂ ,ಹಾಗೆಯೆ ಸ್ವಲ್ಪ ದಿನಗಳ ನಂತರ ಡಿಸ್ಚಾಜ೯ ಮಾಡಿದ್ದರು  ಮತ್ತೆ ಮರುಕಲಿಸುತ್ತ ಎಂದು ಗಮನಿಸುತಾ ಚಿಕಿತ್ಸೆ  ಮುಂದುವರಿಸಲು ಹೇಳಿದರೂ ಕ್ರಮೇಣ ನನ್ನ. ಮಗಳು ಸರಿ ಆದಲೂ  ನಿಮ್ಹಾನ್ಸ್ ಎಂದರೆ ಭಯ ಪಡುತಿದ್ದ ನಾನು ಇಂತಹ ಘಟಣೆ ಗಳನ್ನೂ  ಎಲಿಯಾದರೂ ನೊಡಿದರೆ ನಿಮ್ಹಾನ್ಸಿಗೆ ಕರೆದುಕೊಂಡು ಹೊಗಲು ಹೆಳುತ್ತೆನೆ ಈ ಆಸ್ಪತ್ರೆಯ ಋಣವನ್ನು ನಾನು ಎನೂ ಮಾಡಿದ್ದರೂ ತಿರಿಸಲಾಗದು.....
ಇಂತಹ. ಘಟನೆಗಳು ನಮ್ಮ. ಸಮಾಜದಲ್ಲಿ ತುಂಬಾನೆ ನಡೆಯುತ್ತಿರುತ್ತವೆ, ವಿಙ್ಞಾಣ ಎಷ್ಟೇ  ಮುಂದುವರೆದರೂ ಈಗಲೂ ತಾಯತು ದೇವಸ್ಥಾನದ ಮೊರೆ ಹೊಗುವವರ ಸಂಖ್ಯೆ ಕಡಿಮೆ ಆಗಲಿಲ್ಲ ನಿಮ್ಹಾನ್ಸ್ ನಲಿ ಕೆಲಸ ಮಾಡುವ ನಾನು
ಈ ಸ್ಕಿಝೊಪ್ರೋನಿಯದ ಬಗ್ಗೆ ಕುತುಹಲದಿಂದ ತಿಳಿದುಕೊಂಡಿದೆನೆ ನನ್ನ. ಸಮಾಜದ ಸುತ್ತ ಮುತ್ತ.  ಆಗುವ ಇಂತಹ ಘಟನೆಗಳಿಗೆ ಸ್ಪಂದಿಸುತ ಚಿಕಿತ್ಸೆ ಗೆ ಪ್ರೇರೇಪಿಸುತ್ತ. ನನ್ನ. ಪರಿದಿಯೊಳಗೆ ಕೈಲಾದ ಸಹಯವನ್ನು ಮಾಡುತ್ತಿದ್ದೆನೆ
""ಹುಚ್ಚು ಖಂಡಿತ ಹುಚ್ಚಲ ಅದೊಂದು ಮಾನಸಿಕ ಜ್ವರ, ಮಾಮುಲಿ ಜ್ವರಕ್ಕೆ  ಹೇಗೆ ಡೆಗ್ಯೂ, ಟೈಪಾಯಿಡ್, ಅಂತ ಹೆಸರೊದಿಯೊ ಹಾಗೆ ನಮ್ಮ. ಈ ಮಾನಸಿಕ ಜ್ವರಕ್ಕೆ  ಸ್ಕಿಝೊಪ್ರೋನಿಯ"" ಎನುತ್ತಾರೆ ಚಿಕಿತ್ಸೆ ತೆಗೆದುಕೊಂಡರೆ ಸರಿಯಾಗುತ್ತದೆ........
..........
Ashadeepa
(Meena .s)
34 yrs
Hospital. Asst
Sakalawara nimhans
Ph 9845433443
asha.deepa82@gmail.com

ಶನಿವಾರ, ಅಕ್ಟೋಬರ್ 25, 2014

ಸಂತೆಯ ವ್ಯಾಪಾರಿ ಯಂತೆ

ನಮ್ಮ. ಯಾವುದೋ ಒಂದು ಸಣ್ಣ. ಗೆಲುವು ನಮಗೆ ತುಂಬಾ  ಖುಷಿಯನ್ನು ಒಂದಿಷ್ಟು  ಗೆಳೆಯರನ್ನು  ತಂದು ಕೊಟ್ಟು  ಬಿಡುತ್ತದೆ ನಮಗೆ ನಮ್ಮದೆ ಅದಂತಹ ಇಮೇಜ್ ತಂದುಕೊಟ್ಟಂತಹ. ಗೆಲುವಿನ ಬಗ್ಗೆಯೆ ಇಮೇಜ್  ಸೃಷ್ಟಿ ಸುತ್ತಿರುವ ಗೆಳೆಯರ ಜೊತೆಗೂಡಿ  ಅದೇ ಸಣ್ಣ. ಗೆಲುವಿನ ಬಗ್ಗೆಯೇ  ದೊಡ್ಡದಾದ ಪೋಜುಗಳನ್ನು  ನೀಡುತ್ತ ದೊಡ್ಡದಾದ. ಮಾತುಗಳನ್ನಾಡುತ್ತ.  ವೇದಾಂತಿಗಳಾಗಿ  ಮುಂದಿನ ಕೆಲಸಗಳ ಕಡೆಗೆ ಗಮನವನ್ನೆ  ಹರಿಸದೆ  ಇಂದಿನ ಸಮಯವನ್ನೆಲ್ಲ. ಆ ಸಣ್ಣ. ಗೆಲುವಿನ ಖುಷಿಯ. ಸಂಭ್ರಮದ ಮಾತುಗಳಲ್ಲಿಯೇ ಮಣ್ಣು  ಮಾಡಿ ಬಿಡುತ್ತೆವೆ.

ನಿಜಕ್ಕೂ  ಒಂದು ಗೆಲುವಿನ ಸಂಭ್ರಮದಲ್ಲಿಯೇ ಸಮಯವನ್ನು  ವ್ಯಯ ಮಾಡುವುದು ಎಂದರೆ ಸತ್ತ ಹೆಣವನ್ನಿಟ್ಟುಕ್ಕೊಂಡು ತಿಂಗಳಾನುಗಟ್ಟಲೆ ರೋದಿಸಿದಂತೆ ಇದರಿಂದೆನು  ಸತ್ತ. ವ್ಯಕ್ತಿಯು ಎದ್ದು   ಬರಲಾರ. ಸಮಯವು ಉಳಿಯಲಾರದು ಕಣ್ಣೀರಿನ ಖಚು೯. ಕೂಡ ವ್ಯಥ೯ವಾಗಿ ಬಿಡುವುದು.

ಸುಖಾಸುಮ್ಮನೆ ಮನಸ್ಸಲ್ಲಿ ದುಃಖ. ಮಡುವುಗಟ್ಟಿರುತ್ತದೆ ಅಷ್ಟೆ
ಗೆಲುವು ಅಂದ್ರೆ  ಸುಂದರವಾದ ಚಿಟ್ಟೆಯ ತರಹ ಯಾವಗ ಬೇಕಾದರು ಅದು ನಮ್ಮನ್ನು ಬಿಟ್ಟು  ಬೇರೊಬ್ಬರ ತೋಳ್ತೆಕ್ಕೆಗೆ ಸೇರಿ ಅವರನ್ನು  ಒಂದಿಷ್ಟು  ಕಾಲ ಸಂತೋಷದಿಂದಿರಿಸಿ ಮತ್ತೋಬರ ಕಡೆ ಹಾರಿ ಬಿಡಬಹುದು ಆದರೆ ಸೋಲು ಎಂಬುವುದು ತಾಯಿಯ ತರಹ. ,ಮಕ್ಕಳಾದ ನಾವು ಎಷ್ಟೇ ತಪ್ಪುಗಳನ್ನು  ಮಾಡಿದರು ಅವುಗಳನ್ನು  ತಿದ್ದಿ  ತೀಡಿ ಸರಿಯಾದ ದಾರಿಯಲ್ಲಿ  ನಡೆಯುವಂತೆ ಮಾಡಿ  ಕೊನೆಯವರೆಗೂ  ಮಾಗ೯ದಶ೯ನ. ನೀಡುತ್ತ. ಅಪ್ಪಿಕೊಂಡು ಬಿಡುತ್ತದೆ  ಕೊನೆಗೆ ಬದುಕಿನ ಬಗೆಗಿನ ಪ್ರೀತಿಯನ್ನು  ,ಒಲವನ್ನು, ಒಂದು ಸುಂದರವಾದ ಬದುಕೆಂಬ. ಬದುಕನ್ನೇ
ನಮಗೆ ನೀಡಿ  ಮರೆಯಾಗಿ ಬಿಡುತ್ತಾಳೆ
ಅದಕ್ಕಾಗಿಯೇ ಹೇಳುವುದು  ಗೆಲುವು ಎಂಬುದು  ಶಾಶ್ವತವಲ್ಲ. ಅದು ತಾತ್ಕಲಿಕವಾದದ್ದು  ಒಂದು ಗೆಲುವಿನ ಸಂಭ್ರಮ. ಕೆಲವೇ ದಿನಗಳಲ್ಲಿ  ನಿಧಾನವಾಗಿ ಮರೆತೆ ಹೋಗಿಬಿಡುತ್ತದೆ

ಒಬ್ಬ ನಾಯಕ ನಟನ ಯಾವುದೋ ಒಂದು ಚಿತ್ರ.  ಶತದಿನೋತ್ಸವವನ್ನು   ಆದರಿಸಿ ಬಿಟ್ಟೆತ್ತೆಂದರೆ ಮುಂದಿನ ಅವನ ನಟನೆಯ ಎಲ್ಲಾ ಚಿತ್ರ ಗಳು ಶತದಿನೋತ್ಸವವನ್ನೆ  ಆದರಿಸುತ್ತವೆ ಎಂದೇನಿಲ್ಲ. ಒಂದು ಕಾಲಕ್ಕೆ  ಯಶಸ್ವಿ  ನಾಯಕನಟ ಎಂದೆನಿಸಿಕೊಂಡವನು  ಕೇಲವೆ ದಿನಗಳಲ್ಲಿ  ಇದ್ದ ಸ್ಟಾರ್ಗಿರಿಯನ್ನು  ಕಳೆದುಕೊಂಡು  ಗಾಂಧಿನಗರದ. ನಡುಬೀದಿಗಳಲ್ಲಿ  ನಡೆದಾಡಿದರೂ ಯಾರುಗೂ ಕೂಡ ಗುರುತು ಸಿಗಲಸರದಷ್ಟು  ಜನರ ಮನಗಳಿಂದ. ಅಳಿಸಿ ಹೋಗಿ ಬಿಡಬಹುದಲ್ವಾ  ನಾವುಗಳು ಹಾಗೆಯೇ  ಒಂದೇ ಗೆಲುವಿನ. ಫಲಿತಾಂಶವನ್ನೆ  ನಮ್ಮ. ಹಿರಿಮೆಗೆ ಗರಿಯೆಂಬತೆ  ಸಿಂಗರಿಸಿಕೊಂಡು ಅದರಲ್ಲೆ  ಕೂತುಬಿಟ್ಟರೆ  ಭವಿಷ್ಯತ್ಕಾಲಾದಲ್ಲಿ ಭೂತಕಾಲಕ್ಕೆ  ಸೇಪ೯ಡೆಯಾಗಿಬಿಡುತ್ತೇವೆ
ಮೇಲಿನ ನಾಯಕನಂತೆ .
ಆದಕೆ ಪ್ರತಿ ಗೆಲುವಿನ ನಂತರ ಮುಂದಿನ ಗೆಲುವಿನ ಸೀಮೋಲ್ಲಂಘನೆಗೆ  ಸಿದ್ದರಾಗಿ ಹೊರಡುತ್ತಿರಬೇಕು  ಚಕ್ರವ್ಯೂಹದ ಅಭಿಮನ್ಯುವಿನಂತೆಯೇ.

ಸಂತೆಯಲ್ಲಿ ವ್ಯಾಪಾರ ನಡೆಸುವ ವ್ಯಕ್ತಿ  ಸದಾ ಲಾಭದ ಕಡೆಗೆ ಗಮನ ಕೋಡುತ್ತಾನೆ ನಷ್ಟದ ಕಡೆಗಲ್ಲ  ಈ ದಿನದ ಸಂತೆ ಮುಗಿದ ತಕ್ಷಣ. ಆ ದಿನದ ಲಾಭವನ್ನೆ  ಎಣಿಸುತ್ತಾ ಸಮಯವನ್ನು  ವ್ಯಥ೯ ಮಾಡುವುದಿಲ್ಲ. ಬದಲಾಗಿ ಮುಂದಿನೂರಿನ. ಸಂತೆಯ ಕಡಗೆ  ತನ್ನ. ಸರಕನ್ನು ಸಾಗಿಸುವ ಕಡೆಗೆ ತಲ್ಲೀನನಾಗುತ್ತಾನೆಯೇ ಹೊರೆತು  ಸಂತೆಯ ಸಡಗರದ ಗದ್ದಲದಲ್ಲಿ ಲಾಭದ ಲೆಕ್ಕಾಚಾರದಲ್ಲಿ ಕೂರುವುದಿಲ್ಲ. ಹೀಗೆಯೇ ದಿನವು ಕೂಡ ಯಾವುದರ ಬಗ್ಗೆನು ಯೋಚಿಸದೆ ಕೇವಲ ಮುಂದಿನ ಸಂತೆಯ ಬಗ್ಗೆ ಯೋಚಿಸುತ್ತ. ಅದರಲ್ಲಿ ಕಾರ್ಯಪ್ರವೃತನಾಗಿ ಬಿಡುತ್ತಾನೆ.
ಹೀಗೆ  ಒಂದೊಂದೂರಿನ. ಸಂತೆಯ ಲಾಭವನ್ನೆಲ್ಲಾ  ಒಟ್ಟು ಗೂಡಿಸಿ  ಒಂದು  ದಿನ ಪಟ್ಟಣದಲ್ಲಿ  ದೊಡ್ಡದಾದ ಹೋಲ್ ಸೇಲ್  ಅಂಗಡಿಯನ್ನೆ ತೆರದುಬಿಡುತ್ತಾನೆ.

ಒಂದೇ  ಗೆಲುವಿನ ಖುಷಿಯಲ್ಲಿಯೆ  ಕಳೆದು ಹೋಗಿದ್ದರೆ  ಅಲೆಕ್ಝಾಂಡರ್,ನೆಪೋಲಿಯನ್, ಹಿಟ್ಲರ್ ನಂತವರು ಇತಿಹಾಸದ ಪುಟಗಳಲ್ಲಿ  ವಿಜಯಿಶಾಲಿಗಳಾಗಿ ವಿರಾಜಿಸುತ್ತರಲಿಲ್ಲ. ಇವರು ಸದಾ ಒಂದು ಗೆಲುವಿನ ನಂತರ ಮತ್ತೊಂದು  ಗೆಲುವಿನ ಕಡೆಗೆ  ದಾಪುಗಲಿಡುತ್ತಾ ಒಂದಿಲ್ಲೋಂದು  ದಿನ ಇಡಿ ಪ್ರಪಂಚವನ್ನೆ  ಗೆಲ್ಲುತ್ತೆನೆ ಎಂಬ. ಅದಮ್ಯ ವಾದ. ಆಶಾ ಭಾವನೆ  ಜೋತೆಗೆ ನಾವುಗಳೂ ಕೂಡ ಅಷ್ಟೇ  ನಮ್ಮ. ಜೀವನದ ಯಾವುದೊ ಒಂದು ಸಣ್ಣ. ಗೆಲುವಿನ ಖುಷಿಯಲ್ಲೆ ಬಹಳ ದಿನಗಳ ಕಾಲ ಉಳಿಯದೆ  ತತ್ಕಕ್ಷಣದಿಂದಲೆ ಮುಂದಿನ. ಗೆಲುವಿನ ಕಡೆಗೆ  ಮುಖಮಾಡಿ  ನಿಲ್ಲಬೇಕು.
ಗೆಲುವಿನ ಬಗೆಗೆ ಕುರಿತಾದ ಪೂವ೯  ತಯಾರಿಗಳನ್ನು  ನಡೆಸುತ್ತಾ ಸತತ. ಪರಿಶ್ರಮದ ಹಾದಿಯ ಮೂಲಕ ಗೆಲುವಿನ ಗುರಿಯ ಕಡೆಗೆ ಹೆಜ್ಜೆ ಹಾಕಬೇಕು.
ಸಾಧನೆಯ ಹಾದಿಯಲ್ಲಿ ನಡೆಯುತ್ತಾ  ನಡೆಯುತ್ತಾ ಒಂದೊಂದೆ ಗೆಲುವಿನ ಮೈಲುಗಲ್ಲುಗಳನ್ನು  ದಾಟುತ್ತಾ ಎಲ್ಲಿಯೂ  ವಿಶ್ರಮಿಸದೆ  ನಮ್ಮ. ಗುರಿಯನ್ನು  ತಲುಪ ಬೇಕೆ ಹೊರೆತು  ಒಂದು ಮೈಲುಗಲ್ಲು  ದಾಟಿದ ಸಂಭ್ರಮದಲ್ಲಿ  ಅಲ್ಲಿಯೇ  ಕುಳಿತು ಬಿಟ್ಟರೆ  ಮತ್ತಾರೋ  ನಮಗೂ ಮುಂಚೆ  ನಮ್ಮನ್ನು  ದಾಟಿ  ಹೋಗಿ  ಬಿಡಬಹುದು  ಗುರಿಯನ್ನು  ತಲುಪಿಬಿಡಬಹುದು  ಆಗ ನಾವು  ಎರಡನೆಯವರೋ  ಮೂರನೆಯವರೋ ಕೆಲವೊಮ್ಮೆ  ಗುರಿ ತಲುಪದೆನೆ ಇರಬಹುದು ಅಥವ ಸಂಜೆಯಾಗಿ ಕತ್ತಲಾಗಿ ಬಿಡಬಹುದು
ಮುಂದೆಯು ಸಾಗಲಾರದೆ ಹಿಂದೆಯು ಹೋಗಲಾರದೆ  ಕತ್ತಲೆಯ ನಡುವೆ  ನಾವೆಂಬ ನಾವೇ ಕಳೆದು ಹೋಗಿಬಿಡಬಹುದು.
ಒಂದು ಗೆಲುವಿನ ನಂತರ ಮತ್ತೊಂದು ಗೆಲುವಿನ ಕಡೆಗೆ ಅಥವ ಪ್ರತಿ ಕ್ಷಣವೂ ಕೂಡ ಮುಂದೇನು? ? ಎಂಬುದರ ಕುರಿತು  ಯೋಚಿಸುತ್ತಾ ಅದರಲ್ಲಿ ಕಾಯ೯. ಪ್ರವೃತರಾಗಿ  ಮುಂದಿನ ದಾರಿಯಲ್ಲಿನ ಗೆಲುವಿನ ಮೈಲುಗಲ್ಲಿನ. ಕಡೆಗೆ  ಭರಭರ ಹೆಜ್ಜೆ  ಇಡುತ್ತಾ  ಸಾಗುತ್ತಿರಬೇಕು
ಥೆಟ್ ಸಂತೆಯ ವ್ಯಾಪಾರಿಯಂತೆ .................

Sent via Micromax

ಶುಕ್ರವಾರ, ಅಕ್ಟೋಬರ್ 24, 2014

ಪದ್ಯ ಮುಖಿ ಪುಷ್ಪ

ಮಣ್ಣಿನ ಬಳೆಗಳ ಗಲಗಲ ಸದ್ದು
ಗೆಜ್ಜೆಯ ಚಿರು ನಾದ
ಆ ಕಡೆ ನೋಡುತ್ತೇನೆ
ಹಣ್ಣಾಗಿ ನೆಲಕುರುಳಿದ ಉಂಡೆಯಾಕರಾದ
ಎಲೆಗಳ ಸದ್ದು

ಕೃತಜ್ಞತಾಭಾವವಾಗಿ ಭೂಮಿಗೆ
ಸಷ್ಟಾಂಗ ನಮಸ್ಕಾರವನ್ನು  ಮಾಡುತ್ತಾ
ಹಾಗೇ ಸುಮ್ಮನೇ
ಉರುಳಿ ಹೋಗುತಿವೆ

ವನದ ಬಾಗಿಲಲ್ಲಿ ಯಾರೋ
ಯಕ್ಷರ ಕಿಲಕಿಲ ನಗುವಿನ ಸದ್ದು
ಈ ಕಡೆ ನೋಡುತ್ತೇನೆ
ಹಚ್ಚ ಹಸುರಿನ ಗರಿಕೆಗಳ ಮೇಲೆ
ಬೆಳ್ಳಿ  ಕಿರಣಗಳ. ಹಚ್ಚೆಯನ್ನು
ಸೂಯ೯ನು ಹಾಕುತ್ತಿದ್ದಾನೆ

ತುಟ್ಟಿಗಳ. ಕದಲುವಿಕೆಯ ಹೊರೆತು
ಶಬ್ದವು  ಕೇಳಿಸದಂತೆ ನನ್ನ
ನಲ್ಲನ ರಹಸ್ಯ. ಪ್ರಣಯ ಸಂಭಾಷಣೆಯಂತ್ತಿದೆ

ಹನಿ ಹನಿಯಾಗಿ
ಸ್ವಾತಿ ಮುತ್ತು ಗಳು ಬಿದ್ದ ನೆಲಕ್ಕೆ
ಕಿವಿ ಇಟ್ಟು  ಕೇಳಿದೆ
ಬೀಜವು ಮೊಳಕೆಯಾಗಿ
ಪರಿವರ್ತನೆ ಯಾಗುವ ಒಂದು
ಅದ್ಭುತವಾದ ಜೀವನ ಕ್ರಿಯೆ
ಅವಿಷ್ಕೃತವಾಗುತ್ತಿದೆ.

ಗುರುವಾರ, ಅಕ್ಟೋಬರ್ 23, 2014

ನಿಸಗ೯ ಸ್ಪಂದನ

ಭೂಮಿ ಬಾನಿನ ಸಮಾಗಮವೆ
ಗುಡುಗು ಸಿಡಿಲುಗಳೇಳುತಿವೆ
ನೋಡು
ಒಮ್ಮೊಮ್ಮೆ  ಕೋಲ್ಮಿಂಚು ಮಿಂಚಿ
ಹುರಿದುಂಬಿಸುತಿದೆ ನೋಡು
ಭೋಗ೯ರೆತ ಜಲಪಾತದ ನಡಿಯ
ರಭಸದಿ ತಾನು ಸಾಗುತಿದೆ ನೋಡು
ಪಿಯತಮನ ಸೇರುವ ಮಿಡಿತದಲಿ
ಏನನ್ನು  ಲೆಕ್ಕಿಸದೆ ಸಾಗುತಿದೆ ನೀ ನೋಡು

ಮೋಡ ಮುಚ್ಚಿ ದ್ದರು ಕೂಡ
ಭೂಮಿಯ ಚುಂಬಿಸಲೆಂದು
ಮೋಡದೊಳಗೆ ದಾರಿ ಮಾಡಿ
ರವಿಯ ಕಿರಣಗಳು  ಬರುತಿವೆ ನೀ ನೋಡು

ಕೂಡಲು ಆಗದಿದ್ದರೂ ತಿಂಗಳ
ಬೆಳಕಿಗೆ ಉಕ್ಕಿ  ಅವನ ಬೆಳಕಲಿ
ಮಿಂದು ಸಾಗರವದು ಬೀಗುತಿದೆ
ಆನಂದದಲ್ಲಿ  ನೀ ಬಂದು ನೋಡು.