ಸೋಮವಾರ, ನವೆಂಬರ್ 24, 2014

ಕಾಲಿನ ಕಾಡೆ ನೊಡುವಾಗ

ಇವತ್ತು ಯಾಕೋ ಕಾಲಿನ ಕಡೆ ನೋಡ್ತಾ ಇರುವಾಗ ಬೆತ್ತಲೆ ಪಾದಗಳು ನೆನಪಾದವು.
ಹೌದಲ್ಲಾ ...ಬರಿಗಾಲಲ್ಲಿ ನಡೆದು ಎಷ್ಟೊಂದು ದಿನವಾಯ್ತಲ್ಲ
ನಡಿಯೊಣ ಅಂತ ಚಪ್ಪಲಿ  ಬಿಟ್ಟು  ಬರಿಗಾಲಲ್ಲಿ ನಡೆದೆ.
ಮೊದಲು ಮಣ್ಣು ಕೂಡ ಚುಚ್ಚಿ ದಂತೆ ಎನಿಸಿದರೂ  ನಂತರ ಹೊಂದಿಕೊಂಡ್ತು
ಮಣ್ಣು, ಕೆಸರು,ಮಳೆಯ,ನೀರಿನ ತಂಪು
ಹುಲ್ಲಿನ ಕಚಗುಳಿ
ಕಾಣದ ಸಣ್ಣ. ಮುಳ್ಳಿನ. ಚುಚ್ಚುವಿಕೆ
ಓಹ್ ಎಲ್ಲಾ ಅದೆಷ್ಟು  ಹಿತವೆನಿಸುತ್ತಿದೆ
ಇದನ್ನೆಲ್ಲಾ ಯಾಕೆ ಇಷ್ಟು  ದಿನ ಮರೆತೆ
ನನ್ನನ್ನೇ ನಾನು ಬಯ್ದು ಕೊಂಡೆ.
ಆ ದಿನಗಳು ...
ಚಪ್ಪಲಿಯಿಲ್ಲದ ದಿನಗಳು ನೆನಪಾದವು
ಹಾಗೆ ಚಪ್ಪಲಿ ಇಲ್ಲದೆ ನಡೆಯುವಾಗ ಮುಳ್ಳು (ಜಾಲಿ) ತಿಳಿದಿದ್ದು ನೆನಪಾಯ್ತು
ಈ ಮುಳ್ಳು ಮುರಿತದಲ್ಲೂ ವಿಧಗಳಿವೆ
ಹಸಿಜಾಲಿ (ಬಳ್ಳರಿ) ತುಳಿದ್ರೆ ಅದು ಕಾಲಲ್ಲಿ ಮುರಿಯೋದಿಲ್ಲ
ಆದರೆ ಆ ನೋವಿದೆಯಲ್ಲ  ಅಬ್ಬಾ  ಅದನ್ನ ಅನುಭವಿಸಿಯೇ ತೀರಬೇಕು.
ಕಾಲು ಎತ್ತಿಡಲೂ ಸಾಧ್ಯವಾಗೋದಿಲ್ಲ. ಗೊತ್ತಾ?
ಮೂರು ದಿನ ಬೇಕು ಸರಿಯಾಗಿ ಓಡಾಡ್ಲಿಕ್ಕೆ
ಇನ್ನು  ಕೊಳೆತ ಜಾಲಿಮುಳ್ಳು ತುಳಿದ್ರಂತೂ ಕಮ೯
ಕಾಲಲ್ಲಿ ಮುಳ್ಳು ಮುರಿಯೋದಂತೂ ಗ್ಯಾರಂಟಿ
ಜೊತೆಗೆ ನೋವು ಮತ್ತು ಕಾಲಿಟ್ಟಾಗಲೆಲ್ಲಾ ಈಟಿಯಿಂದ ಅಂಗಾಲಿಗೆ ಚುಚ್ಚಿದಂತೆ ಅನುಭವ,ಅದನ್ನು  ಬಗೆದು ತೆಗೀಲಿಕ್ಕು ಬರೋದಿಲ್ಲ,ಸ್ವಲ್ಪ. ಬಗೆದು ಕಳ್ಳಿ ಅಥವಾ ಎಕ್ಕೆ ಅಥವಾ ಕಿವಿಯಲ್ಲಿನ ಕಸವನ್ನು ತೆಗೆದು ಅಥವಾ ಎಮ್ಮೆ ಸಗಣಿಯನ್ನು  ಕಟ್ಟಿ  ಅದು ಕೀವಾಗುವುದನ್ನು  ಮೂನಾ೯ಲ್ಕು  ದಿನ ಕಾದು  ಬಗೆದು ತೆಗೆದಾಗ ನಿಜಕ್ಕೂ  ಸ್ವಗ೯ ಸುಖ. ಬಗೆಯುವವರ ಕೈಯಲ್ಲಿ  ಕಾಲು ಕೊಟ್ಟು  ಹಲ್ಲು  ಕಚ್ಚಿ  ಹಿಡಿದು (ಒಮ್ಮೊಮ್ಮೆ  ಬಟ್ಟೆ  ಕಚ್ಚಿ)
ಬಗೆಸಿಕೊಳ್ಳೋದು  ಮಸ್ತ. ಮಜ
ಹಾಗೆಯೇ ಮುಳ್ಳು  ಬಗೆಯೋದು ಕೂಡ ಒಂದು ಕಲೆ
ಮುಳ್ಳು  ಹೊಕ್ಕವರ ಗಮನವನ್ನು  ಬೇರೆಡೆಗೆ ತಿರುಗಿಸಿ ನಿಧಾನಕ್ಕೆ  ಬಗೀಬೇಕು, ಮುಳ್ಳು  ಬಗೆಯಲು ಬಳಸುವ ಸಾಧನಗಳುಲ್ಲೂ  ವೈವಿಧ್ಯತೆಯಿದೆ
ಮುಳ್ಳನ್ನ. ಮುಳ್ಳಿ ನಿಂದಲೇ ತೆಗೀಬೇಕಲ್ಲ, ಸೂಜಿ, ಪಿನ್ನು, ಮುಳ್ಳಗಡಿ ಹೀಗೇ
ಆ ಅನುಭವಗಳೇ ಅಂತಹವು, ಕಾಲು ತುಂಬೆಲ್ಲಾ ತೂತುಗಳೇ ಇತಿ೯ದ್ದವು
ಈಗ ಬರೀ ಗಾಲು ನುಣ್ಣನೇ ಖಾಲಿ ಕಾಲು..........
ಆ ದಿನಗಳೇ ಬೇರೆ ಅಲ್ವಾ ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ