ಸೋಮವಾರ, ಮೇ 25, 2015

ಸವಾಲಿನ ಹೆಡಿಗೆ ತುಂಬಾ ಹೇಲು ಹೊತ್ತು ಹೊರಟವಳು .. ಅಂಜಿಕೆಯಿಲ್ಲ,ಅಳುಕಿಲ್ಲಾ ನಿಲುವಿನೇಜ್ಜೆಯ ದಾರಿ ಸ್ಪಷ್ಟ.... ಕೇಳಿರಣ್ಣಾ, ಕೇಳಿರಪ್ಪಾ ಕೇಳಿರಯ್ಯ.. ನನ್ನ ಆರ್ತನಾದವಲ್ಲವಿದು ಹೊಟ್ಟೆಯುರುಕರಚ್ಚಿದ ಅಗ್ಗಿಷ್ಟಿಕೆ... ಬರಸಿಡಿಲು ಭರಿತ ಮಡಿಲಿಗೆ ಅಳುವೊರೆಸಿ ಸೆರಗ ಕಟ್ಟಿರುವೆ .. ಬಿಚ್ಚಿನೋಡಿ ನೆಣವಿದ್ದರೇ ಅಣುಸ್ಪೋಟಕೇ ಎದೆಯೊಡ್ಡಿ.. ಹನಿಮಳೆಯ ಹೊಗಳಿ ನೆನೆಯದಿರಿ.. ನಿಮ್ಮದೇ ಹೇಲು ಹೊರಿಸಿದ್ದು ನನಗೆಂತ ನಾಚಿಕೆ ಹೊರಲು, ಹೊಸಲಿನ ಗೌಲು ಹೊಮ್ಮಲು ನಿಮ್ಮಲೂ.. ದ್ರೋಣಾಲಿಂಗನದ ಅರ್ಜುನರೇ ನಿಮ್ಮಲ್ಲೇ ಇರಲಿ, ಹೆಸರೆಲ್ಲಾ ಬೆರಳು ಕೊಡಲೆನೆಗೆ ಅಳುಕಿಲ್ಲ.. ನಿಮ್ಮೆಲ್ಲಾ ಸ್ವಾರ್ಥ ಪಾತ್ರ ಪೋಶಿಸಲಿ ನನ್ನೀ ಹೀನ ಬದುಕಿನ ಪಾತ್ರೆ .. ಕಸದ ಕಾಸೂ ಕಸಿದುಕೊಳ್ಳಿ, ಉದರ ನ್ಯೆವೈದ್ಯದೆಡೆ ಬಡಿಸಲು ಕಸುವಿದೆ ನೋವ ನೆರಿಗೆಗೆಯನೆಳೆಯದಿರಿ.. ಬಲಿತವಳಲ್ಲ, ಬಲ್ಲಿದಳಲ್ಲಾ ಹಣೆಬರಹಕೇ ದೇವರೊಲುಮೆಯಿಲ್ಲ ಆಶಯದ ದೀಪವೊಂದೇ, ಆರಿಸಿದಿರಿ ಕದ್ದವಳಲ್ಲ, ಕಳ್ಳಿಯಲ್ಲ ಶೋತ್ರುಗಳೇ ಅಕ್ಷರ ಬಿಕ್ಷುಕಿ ಶಿಕ್ಷಿಸಿ ,ಭಕ್ಷಿಸದಿರಿ

ಶನಿವಾರ, ಫೆಬ್ರವರಿ 14, 2015

ಏನೆಂದು ಹೆಸರಿಡಲಿ

ನಾನಾದರೂ ಕೇಳಲಿಲ್ಲ
ನೀನಾದರೂ ಹೇಳಲಿಲ್ಲ
ತಿಳಿಯದಾದೆ ನಾ
ನಿನ್ನ ಮನದ ಭಾವನೆಯ
ಹೇಗೆಂದು ನಾ ಅಥೈ೯ಸಲಿ
ಹೆಸರಿಡದ ಈ ಬಂಧವಾ?
ಎಲ್ಲಕ್ಕೂ ಮೀರಿದ ಬಂಧನ
ನಮ್ಮೀ ಮನದ
ಭಾವನೆಗಳ ಸಮ್ಮಿಲನ
ಸಾಗರದಲೆಗೆ ನಿಲುಕದ್ದು
ಗಗನದಾಚಿನ ಅಂಚಿನದು
ಒಮ್ಮೆ
ಉತ್ತರಿಸುವಿರಾ
ಆಲಿಸುವಿರಾ
ಮಿಂಚಿನವೇಗದ
ಕಣ್ಣಂಚಿನ ನೋಟದ ಈ ಅಥ೯ವ

ಶುಕ್ರವಾರ, ಫೆಬ್ರವರಿ 13, 2015

ಬಿಳಿ ಹಾಳೆ

ನೋವಾದರೂ
ನಲಿವಾದರೂ
ನೀನೇನೆ ಎಲ್ಲಾ ನನಗೆ
ಮುಚ್ಚು ಮರೆಯಿಲ್ಲದೆ
ಹುಚ್ಚಿಯಂತೆ ಒಮ್ಮೊಮ್ಮೆ
ಬಿಚ್ಚಿಡುವೆ ಎಲ್ಲವೂ ನಿನ್ನಲ್ಲಿ

ಅಳು ಬಂದರೂ
ಸಿಟ್ಟಾದರೂ
ನಿನ್ನನ್ನು ಬಿಟ್ಟು ಯಾರಿದಾರೆ
ಆಗಾಗ ಒದಗದೆಯಾಗಿಸಿದೆ
ಕೆಲವೊಮ್ಮೆ  ಮುದ್ದೆ ಮಾಡಿ
ಮೂಲೆಗೆಸೆದಿರುವೆ
ಇದುವರೆಗೂ ನಿನ್ನ ನೋವೆನೆಂದು ಕೇಳದೆ
ಗೀಚಿಡುವೆ ನನಗನಿಸಿದ ಎಲ್ಲಾ

ಕ್ಷಮಿಸಿಬಿಡು
ಬಿಳಿ ಹಾಳೆ ಗೆಳೆಯ
ನನ್ನವರು ಅಂತ ನನಗ್ಯಾರಿಲ್ಲ
ನಿನ್ನವಿನಹ
.......

Hanigavan

ಯಾರು ಎಲ್ಲಿದ್ದರೇನಂತೆ
ಯಾರು ಜೊತೆಯಲ್ಲಿದ್ದರೆನಂತೆ
ನೆನಪೊಂದು ಜೊತೆಯಿರುವಾಗ
ಕಣ್ಣಿಗೆ ಕಾಣುವುದೆಲ್ಲ
ಅವನ ಪ್ರತಿಬಿಂಬವೇ 

ಗುರುವಾರ, ಫೆಬ್ರವರಿ 12, 2015

ನನ್ನ ಹೆಣಕ್ಕೊಬ್ಬ ವಾರುಸುದಾರ

ನನ್ನ ಹೆಣಕ್ಕೊಬ್ಬ ವಾರಸುದಾರ
ಬೇಕಿದೆ
~~~~~~~~~~~~~~~~~~

ಹಾ ಬೇಕಾಗಿದೆ ನನ್ನ ಹೆಣಕ್ಕೊಬ್ಬ
ವಾರಸುದಾರ
ವಾಸ್ತವತೆಯನ್ನು ಮರೆತ ಹೃದಯವು
ಹಿಮದ ತಿಳಿಯಲ್ಲಿ
ಅಡಿಯಲ್ಲಿ
ಹುದುಗಿರುವ ಬೀಜಗಳು
ಕನಸು ಕಾಣುವ ಹಾಗೆ
ಹೆಣೆಯುತ್ತಿವೆ ಕನಸ್ಸಿನ ಮಾಲೆಯ

ಓ ವಾರಸುದಾರನೇ
ನನ್ನ ನಾಳಿನ ಹೆದರಿಕೆಯೇ
ನಿನ್ನ ಇಂದಿನ ಅವಶ್ಯಕತೆ,
ತಕ೯ಕ್ಕೆ ಸಿಗದ ವಿವರಿಸಲಾಗದ
ಸೆಳೆಯುವಿಕೆಯ ಆಳ
ಸುಳಿವಿದೆ
ರಕ್ತದ ಆವೇಗದ ಕೆಳಗೆ

ಈ ಜೀವತ್ಮದ ದಾಹವೂ
ಬಚ್ಚಿಟ್ಟ ರಾಶಿ ರಾಶಿ
ಕಾಮನಬಿಲ್ಲುಗಳ,
ಆಕಾರವಿಲ್ಲದ ಮುತ್ತು ಹವಳಗಳ
ಹುಡುಕಾಟದಲ್ಲಿದೆ
ನಿಜವಾದ ವಾರಸುದಾರನಿಲ್ಲದೆ

ತಕ೯ಕ್ಕೆ  ಮೀರಿದ ಜಗತ್ತಿನೆಡೆಗೆ
ನನ್ನನ್ನು  ಹಾರಿಸುವ
ವಾರಸುದಾರನೆಂದು
ನಾನು ನೀನುಗಳ ಭೇದವಳಿದು
ಉಭಯ ಸಂಕಟಗಳಿಂದ ಮುಕ್ತಿಯ ನೀಡು
ಸ್ವಚ್ಛಂದ ರಾಗಗಳಿಲ್ಲದ ಪಂಜರದಿಂದ
ನಿತ್ಯದ ಕಟ್ಟಳೆಯ ಬದುಕಿನ ಧಮ೯ದಿಂದ
ಸಾವಿನಷ್ಟೆ  ಖಚಿತವಾದ ನಮ್ಮ ಆಗಲಿಕೆಯಿಂದ

ವೇದಶಾಸ್ತ್ರ, ಪುರಾಣಗಳನ್ನು
ಅಲ್ಲಲ್ಲಿ ತೂರಿ
ಈ ಶೂದ್ರ ತಪಸ್ವಿಯ ಕೈಯಲ್ಲಿ
ನಿನ್ನ ಸರಸಿಜೋದ್ದವನೀಯುತ್ತಾ
ಆಗುವೆಯ ನನ್ನ ವಾರಸುದಾರ

ಭಾನುವಾರ, ಫೆಬ್ರವರಿ 1, 2015

ಪ್ರೇಮಪತ್ರ

ಗಾಂಭೀರ್ಯದ ಸೋಗು ಹೊದ್ದ ಮನಸ್ಸು
~~~~~~~~~~~~~~~~~~

ಎಲೆಗೆ ಆತುಕೊಂಡು ನಿಂತ ಮಳೆ ಹನಿಯಂತೆ, ಜಗದ ಜಂಜಾಟಕ್ಕೆ ಜೋತು ಬಿದ್ದ ನನ್ನನ್ನು  ನಿನ್ನೊಲವು ಆವಿಗೊಳಿಸಿ ಆಗಸದ ಆಲಯದಲ್ಲಿ ಗೊತ್ತು ಗುರಿ ಇಲ್ಲದ ದಾರಿಯಲ್ಲಿ ಅಲೆಯಲು ಬಿಟ್ಟಿದೆ.
ನೂರಾರು ಮೈಲು ದೂರದಲ್ಲಿ ನಿಂತು ಜಗದ ಸಕಲ ಇತಿಮಿತಿಗಳನ್ನು ಕಣ್ತುಂಬಿಕೊಳ್ಳುತಲಿರುವ ನನಗೆ ಎಲ್ಲವೂ, ಎಲ್ಲರೂ ಮಿತಿಯ ಮೂತ೯ ರೂಪವೇ ಅನಿಸುತ್ತೆ.
ನಮ್ಮೊಳಗೆ ಹುಟ್ಟುವ ಕಲ್ಪನೆಗಳು ಯಾರದೋ ನಿರೀಕ್ಷೆಗೆ ಮೂಗುದಾರ ಬಿಗಿಯುವುದು ವಿಚಿತ್ರವೆನಿಸುವ ವಾಸ್ತವ ಅಲ್ವ. ಇನ್ನೊಬ್ಬರ ಕನಸಿನ ಕೂಸಾಗಿ ಬಿಡುವ ನಾವು ನಮ್ಮದೇ ಕನಸಿನ ಬಾಲ ಹಿಡಿದು ಹೊರಟರೆ ನಮ್ಮನ್ನಾಳಲು ಹೊರಟವರ ಮನಸ್ಸಿಗೆ ವಾಸಿಯಾಗುತ್ತದೆ, ಅವರ ಭಾವನೆಗಳನ್ನು ಪುಸಲಾಯಿಸಲು ಹೋದಂತೆಲ್ಲ ನಮ್ಮ. ಕನಸ್ಸಿನ ಚಿತ್ರಗಳು ಬಣ್ಣ ಬದಲಿಸುತ್ತವೆ.
ನಿನ್ನನ್ನು ನಾನ್ಯಾಕೆ ಪ್ರೀತಿಸಿದೆ? ?ಅನ್ನೋ ಪ್ರಶ್ನೆಗೆ ಉತ್ತರ ಅರಸುವ ಪ್ರಕ್ರಿಯೆ ಈಗಲೂ ಚಾಲ್ತಿಯಲ್ಲಿದೆ ಪ್ರೀತಿ ಹುಟ್ಟಲೂ ಒಂದು ಕಾರಣ ಬೇಕಾ ,ಆ ಕಾರಣ ನಮ್ಮ ಗ್ರಹಿಕೆಗೆ ನಿಲುಕಲೇಬೇಕಾ,ಗಾಂಭೀರ್ಯದ ಸೋಗು ಹೊದ್ದುಕೊಂಡು ನಮ್ಮೊಳಗೆ ನಾವಿಳಿದಂತೆಲ್ಲ ಅಮೂತ೯ ಸುಖದ ದಶ೯ನವಾಗುವುದು ಸುಳ್ಳಂತೂ ಅಲ್ಲ, ಅಲ್ವ.
ಮುನಿಸು ಪ್ರೀತಿಯ ಅವಿಭಾಜ್ಯ. ಅಂಗವೆಂಬುದರ ಅರಿವಾದದ್ದು ನಿನ್ನನ್ನು ಬಿಡಿಯಾಗಿ ಗ್ರಹಿಕೆಯ ಪರಿಧಿಯೊಳಗೆ ಕೂರಿಸಿಡಲು ಯತ್ನಿಸಿ ಸೋತಾಗಲೇ
ಉಸಿರು ಬಿಗಿಹಿಡಿದು ನಿನ್ನನ್ನು ಕಣ್ತುಂಬಿಕೊಂಡ ಕ್ಷಣ ಈಗಲೂ ನನ್ನೊಳಗಿನ ನೆನಪಿನ ಗೂಡಲ್ಲಿ ಬೆಚ್ಚಗೆ ಕೂತಿದೆ.
ನೀ ಕಂಡರೂ ಕಾಣದಂತೆ ನಟಿಸುವುದು, ಪ್ರೀತಿಯಿಂದ ಮುನಿಸಿಕೊಳ್ಳುವುದು ನನ್ನ ತುಂಟತನದೆದುರು ಮಂಡಿಯೂರಿ ಕೂರುವುದು ನಿನ್ನದೇ ಆದ ತಿಕ್ಕಲು ಕೋಟಲೆಯಿಂದ ನನ್ನನ್ನು ಕಂಗೆಡಿಸಿ ಅಳಿಸುವುದು ಪ್ರೀತಿಯ ಪುಸ್ತಕದ ಬಿಡಿ ಪುಟಗಳಂತೆ ನನಗೆ ತೋರಿವೆ.
ಹಳೆ ನೋವುಗಳನ ಸಮಾಧಿ ಮೇಲೆ ನಿಂತು ಹೊಸ ನಲಿವಿನ ಸಸಿ ನೆಡಲು ನಾ ಕರೆದಂತೆಲ್ಲ ನೀ ತಕರಾರು ತೆಗೆಯದೆ ಸಹಜ ಪ್ರಕ್ರಿಯೆಯಾಗಿಸು ,ನೋವುಗಳನ್ನ ಧೇನಿಸುವುದರಲ್ಲೂ ವಿಚಿತ್ರ. ಸುಖವಿದೆ, ಹಾಗಂತ ನೆನಪಿನೂರಿನ ಸ್ಮಶಾನದಲ್ಲಿ ನೆಲೆ ನಿಂತ ನೋವುಗಳನ್ನು ಪದೇ ಪದೇ ಬಡಿದೆಬ್ಬಿಸುವುದೇಕೆ? ಅದನ್ನೇ ತಲೆಯ ಮೇಲೆ ಕೂರಿಸಿಕೊಂಡು ಹೊತ್ತು ಮೆರೆಸುವುದು ಖಯಾಲಿ ನಿನಗ್ಯಾಕೆ?
ಮನದ ತುಂಬಾ ಆವರಿಸಿದ ನಿರಾಶೆಗೆ ಮುಲಾಮು ತಿಕ್ಕುವ ಪ್ರೀತಿಗೆ ತಿಕ್ಕಲುತನವೇ ಜೀವ..
ರೀ ನಿನ್ನ ನೋವಿನ ನಿರಾಶೆ ನಾ ಹೆಣೆದ ಭವಿಷ್ಯದ ಹಸಿ ಕನಸು ಎಲ್ಲವೂ ಪ್ರೀತಿಯ ಪಯಣವನ್ನು
ಆಪ್ತವಾಗಿಸುತ್ತಿವೆ
ನಿನ್ನ. ನೋವನ್ನು ಕ್ಷಣ ಕಾಲ ದೂರ ಸರಿಸಿ ನನ್ನೊಂದಿಗೆ ತುಸು ತುಂಟಾಟಕ್ಕಿಳಿದರೂ ನಾ
ಧನ್ಯೆ
...........ನಿನಗಾಗಿ
ಸದಾ ಕಾಯುವ ಮೀನು

ರಬಸ


ಮೆಲ್ಲಗೆ ಗಾಳಿಯೇಳುತ್ತಿದೆಯೆನಿಸುತ್ತಿತ್ತು
ಅಲ್ಲೆಲ್ಲೋ ಸುಂಟರಗಾಳಿಯೆದ್ದು
ಮೋಡ ಕೆಂಧೂಳಿಯಿಂದ ಕೆಂಪಗಾಗಿತ್ತು
ಎಲ್ಲೋ ಹನಿಯುತ್ತಿರಬೇಕು
ಘಮ ಮೂಗಿಗೆಡರುತ್ತಿತ್ತು
ರೊಯ್ಯನೆ ಬಿರುಗಾಳಿಯೆದ್ದಿತು
ಮರ,ಗಿಡ,ಬೆಟ್ಟ....ಊಹೂಂ
ಯಾವ ತಡೆಯೂ ಇಲ್ಲ
ಯಾವುದೆ ತಡೆಯಿಲ್ಲದೆ
ಆ ನಿನ್ನ ಬಿರುಸಿಗೆ
ಅಬ್ಬರದ ಮಳೆ
ಹುಚ್ವುಹೊಳೆ
ಅದೇನು ರಭಸ
ಅದೇನು ಮೊರೆತ
ಹಾಗೆಯೇ ತಣ್ಣಗಾಯಿತು
ತಣಿಸಿದ ಭುವಿಯರಳಿತ್ತು
ದಣಿದ ಮಳೆ ಭುವಿಯಲ್ಲಿ ಹುದುಗಿತ್ತು
ಈಜು
ಮುಗಿದಿತ್ತು

ಭಾನುವಾರ, ಜನವರಿ 25, 2015

ನನ್ನಪ್ಪನಿಗೊಂದು ಕವನ

ನನ್ನಪ್ಪನಿಗೊಂದು ಕವನ
~~~~~~~~~~~~~~

ಬೆಳ ಬೆಳಗೆನೆ ಭಾನುವಾರದ ಆಹ್ಲಾದತೆ ಒಂಥರ ಅಂದವಾಗಿ ನನ್ನನ್ನು ಆವರಿಸಿಕೊಂಡಿದೆ
ಎದ್ದು  ಪ್ರೆಶ್ ಆಗಿ ಪ್ರತಿದಿನದ ಸ್ಕೂಲ್ ಮತ್ತು ಆಫೀಸನ ಅವಸರ ಇವತಿಲ್ಲದ ಕಾರಣ ನಿಧಾನವಾಗಿ ಕಾಪಿ ಕಲಿಸಿಕೊಂಡು ಬಾಲ್ಕನಿಗೆ ಬಂದೆ.
ಎರಡು ದಿನಗಳ ಕೆಳಗೆ ನಾ ತಂದು ನೆಟ್ಟಿದ್ದ ಗುಲಾಬಿ ಗಿಡದಲ್ಲಿ ಅರೆ ಬಿರಿದ ಹೂವುಗಳು ಅಂದವಾಗಿ ಪುಟ್ಟ ಮಗುವಿನ ನಗುವಿನಂತೆ ನಿಮ೯ಲವಾಗಿವೆ ಹಾಗೆ ನೊಡುತ ಎಷ್ಟೋಂತು ನಿಂತಿದ್ದನೊ ಗೊತ್ತಿಲ್ಲ.
ನನ್ನ ೬ ವಷ೯ದ ಮಗ ಅಮ್ಮ ಅಂತ ಬಂದು ನನ್ನ. ಕಾಲು ತಬ್ಬಿನಿಂತಗಲೆ ಎಚ್ಚರವಾದದು
ಮಾಮುಲಾಗಿ  ಸ್ಕೂಲ್ಗೆ ಹೋಗಲು ಎಷ್ಟು  ಸಲ ಎಬ್ಬಿಸಿದರು ಎದ್ದೆಲದ ನನ್ನ ಮಗರಾಯ ಭಾನುವಾರ ಮಾತ್ರ. ನಾನು ಎಬ್ಬಿಸುವ ಮೊದಲೇ ಎದ್ದೇಳುತಾನೆ ಅವತ್ತು ಮಾತ್ರ.  ನನಗೆ ಸ್ವಲ್ಲನೂ ಕಿರಿಕಿರಿ ಮಾಡದೆ ಸ್ನಾನ ಮಾಡಿ ನೀಟಾಗಿ ಡ್ರೆಸ್ ಆಫ್ ಆಗತಾನೆ ಅವನ್ನೆ ಹಾಲು ಕೊಡು ಅಂತ ಕೇಳಿ ಕುಡಿಯುತ್ತಾನೆ
ಇಷ್ಟಕೂ ಹೇಳಿಲ್ಲ ಅಲ್ವ ಅವನು ಭಾನುವಾರ ಅಷ್ಟು  ಬುದ್ಧಿವಂತನಾಗಲು ಕಾರಣ ಅಂದರೆ ಅವರಪ್ಪನ ಜೊತೆ ಮಾಕೆ೯ಟಗೆ ಹೋಗಲು
ಒಂದು ವಾರಕ್ಕೆ ಆಗುವಷ್ಟು   ಸ್ಟೇಷನರಿ, ತರಕಾರಿ,ಚಾಕ್ಲಟ್ಸ, ಬಿಸ್ಕೆಟ್ಸ,ತರಲು ಮತ್ತು ಅವನಿಷ್ಟದ ಸ್ಪೆಷ್ಯಲ್‍ ಐಸ್ಕ್ರಿಂ ತಿನಲು.
ಇವತು ಕೂಡ ಅಪ್ಪ ಮಗ ಇಬ್ಬರೂ ಬ್ರೆಕಪಾಸ್ಟ ಮಾಡಿ ಹೊರಟರು ಆ ಕ್ಷಣ ನನ್ನ. ಮಗನನ್ನು ಮಗುವಿನಲ್ಲಿ ಎಷ್ಟೋ  ಆನಂದವಿತ್ತು ಅವರಿಬ್ಬರನ್ನೂ ಹಾಗೆ ನೋಡುತ್ತಿದ್ದರೆ ನನಗೆ ನನ್ನ ಅಪ್ಪ ಮತ್ತು ನನ್ನ  ನಡುವಿನ  ಅನುಬಂಧ ನೆನಪಾಗತ್ತಿತು

ನಾನು ನನ್ನ  ಅಪ್ಪ  ಪ್ರೀಯಾಗಿ ಮಾತಾಡುತ್ತಿರಲಿಲ್ಲ. ಆದರೆ ನನ್ನ ತಂಗಿ  ಮತ್ತು ನನ್ನ ಅಣ್ಣ ಅಪ್ಪನ ಜೊತೆ ತುಂಬಾ ಪ್ರಿಯಾಗಿ ಮಾತಾಡತಿದ್ದರೂ ಹರಟುತ್ತಿದ್ದರು
ನನಗೆ ಮಾತ್ರ ಅದು ಸಾಧ್ಯ ವಾಗುತ್ತಿರಲ್ಲಿಲ
ಅವರ ಜೊತೆ ಮಾತಡಬೇಕು ಅಂದರೆ ಒಂದು ತರಹ. ಮರ್ಯದೆ ಕೂಡಿದ ಭಯ
ಆದರೆ ನನ್ನ ಮತ್ತು ನನಪ್ಪನ ಮಧ್ಯೆ ಇರುವ ರಿಲೆಷಣಶಿಪ್ ಮಾತ್ರ.  ಪ್ರತ್ಯೇಕವಾದ್ದದು ನಾನು ಹೇಳದಿದ್ದರೂ ನನ್ನ ಫಿಲಿಂಗ್ಸ. ಅವರಿಗೆ ತುಂಬಾ ಚೆನಾಗಿಯೆ ಅರ್ಥ ಆಗುತ್ತಿತು ಮದುವೆ ಆದ ಈ ಹತ್ತು ವಷ೯ಗಳಲ್ಲಿ ತುಂಬಾ ಸಲ ಬರುತಿದೆನೆ ಅಂತ ಹೇಳಿದ್ದೆನೆ ಹೋಗಿ ಅಪ್ಪನಿಗೆ ಸಡನ್  ಸರ್ಪ್ರೆಜ್
ಮಾಡಬೇಕು ಅಂತ ಅನಕೊಲೊವಾಗಲೆ ಲೊ ಮಗ (ಪೆದೊಡ್ಡ) ಅಂತ ಕೂಗುತ ಬರುತ್ತಿದ್ದರು ಹಾಗೆ ಬಂದು ನನಲ್ಲಿ ಹೆಚ್ಚು ಸಂತೋಷನ ಆಚ೯ಯನ ಮೂಡಿಸುತ್ತಿದರು
ನಿಮ್ಮಗೆ ಹೇಗೆ ಗೊತ್ತು ನಾವು ಹೊರಟಿದ್ದೇವೆ ಅಂತ ಯಾರದರೂ ಹೇಳಿದರು ಅಂತ ಕೇಳಿದ್ದರೆ ನನ್ನಗೆ ಅನಿಸಿತು ನೀನು ನನ್ನ ನೊಡೊಕೆ ಹೊರಟಿದಿಯ ಅಂತ ಇನ್ನೂ ಮಕ್ಕಳಿಗೆ ಅಳಿಯನಿಗೆ  ರಜೆ ಹಾಕಿಸಿ ಬರೋದು ಯಾಕೆ ಅಂತ ನಾನೆ ಬಂದೆ ಅನುತ್ತಿದ್ದರು

ನನಗೆ ಯಾವಗಾದರೂ ಮನಸ್ಸು ಬೇಸರವಾಗಿ ಅಪ್ಪನ ಹತ್ತರ ಮಾತಡಬೆಕು ಅವರ voice ಅದರು ಕೇಳಬೇಕು ಅನಕೊಲುವಾಗಲೆ ಅವರ ಕಾಲ್ ಬರುತ್ತಿತು
ಅವರ ಕಾಲ್ ನನ್ನ ಪೊನ ನಲಿ ನೊಡುತ್ತಿದರೆನೆ ಧೈರ್ಯ ಬರುತಿತು
ಅವರು ನನ್ನ ಜೊತೆನೆ ಇದ್ದರೆ ಅನಿಸುತಿತು ಅವರ voice ಕೇಳಿದ ಕೂಡಲೆ ಟೆನಷಣ್ ಪೂರ್ತಿ ಮಾಯ ಆಗುತ್ತಿತು

ಅವರ ಪ್ರಾಣ ನನ್ನಲೆ ಇದೆ ಅನೋ ಹಾಗೆ ಬದುಕುತ್ತಿದ್ದರು ನಮ್ಮಪ್ಪಾ
ಇದಕ್ಕೆ ಬದಲಾಗಿ ನಾನೇನು ಮಾಡಲಿ ಅನಿಸುತ್ತಿತು ಹಾಗೆ ಯೊಚಿಸುವಾಗಲೆ ಪೊನ್ ರಿಂಗ್ ಆಯ್ತು ನನ್ನಗೆ ಗೊತ್ತು ಅದು ನನ್ನಪ್ಪನ ಫೋನ್ ರಿಸಿವ್ ಮಾಡಿಕೊಂಡ ತಕ್ಷಣ ನಾನು ಹೆಳೊ ಮೊದಲ ಮಾತು love u lot nd miss u lot ಅಪ್ಪ ಅಂತ
ಅವರಿಗಾಗಿ ಈ ನಾಲ್ಕ ಸಾಲು

ಅಪ್ಪ
ನನ್ನ  ಅಕ್ಷರಗಳ ಸಂಪತಿಗಾಗಿ
ನೀವೂ ಬಿಕರಿಯಾದಿರ
ನನ್ನ ನಡುಗೆ ಗೋಸ್ಕರ ನೀವು
ಪಾದುಕೆಗಳಾದರ
ಅಪ್ಪ
ನನ್ನನ್ನು  ವಿದ್ಯಾವಂತಳಾಗಿಸಲು
ನೋಡಿದರೆ ಹೊರೆತು
ಕಿತ್ತು ಹೋದ ಅಂಗಿಯೊಂದಿಗೆ
ಕಾಣಷಿಸುತಿರುವ ನಿಮ್ಮ
ಎದೆಯನ್ನು
ಬಚ್ಚಿಟ್ಟು ಕೊಲಬೆಕೆಂದು
ಅನಿಸಲಿಲವ
ವಿಚಲಿತವಾದ ಮನಸ್ಸಿನೊಂದಿಗೆ
ನೀನಿಲ್ಲದೆ ಶೂನ್ಯ
ಆವರಿಸುತ್ತಿದೆ
..........ashadeepa......