ಭೂಮಿ ಬಾನಿನ ಸಮಾಗಮವೆ
ಗುಡುಗು ಸಿಡಿಲುಗಳೇಳುತಿವೆ
ನೋಡು
ಒಮ್ಮೊಮ್ಮೆ ಕೋಲ್ಮಿಂಚು ಮಿಂಚಿ
ಹುರಿದುಂಬಿಸುತಿದೆ ನೋಡು
ಭೋಗ೯ರೆತ ಜಲಪಾತದ ನಡಿಯ
ರಭಸದಿ ತಾನು ಸಾಗುತಿದೆ ನೋಡು
ಪಿಯತಮನ ಸೇರುವ ಮಿಡಿತದಲಿ
ಏನನ್ನು ಲೆಕ್ಕಿಸದೆ ಸಾಗುತಿದೆ ನೀ ನೋಡು
ಮೋಡ ಮುಚ್ಚಿ ದ್ದರು ಕೂಡ
ಭೂಮಿಯ ಚುಂಬಿಸಲೆಂದು
ಮೋಡದೊಳಗೆ ದಾರಿ ಮಾಡಿ
ರವಿಯ ಕಿರಣಗಳು ಬರುತಿವೆ ನೀ ನೋಡು
ಕೂಡಲು ಆಗದಿದ್ದರೂ ತಿಂಗಳ
ಬೆಳಕಿಗೆ ಉಕ್ಕಿ ಅವನ ಬೆಳಕಲಿ
ಮಿಂದು ಸಾಗರವದು ಬೀಗುತಿದೆ
ಆನಂದದಲ್ಲಿ ನೀ ಬಂದು ನೋಡು.
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ