ಸುಜಿ ಏನ ಮಾಡುತ್ತಿದ್ದಿಯ ಒಬ್ಬಳೇ ಯಾರ ಜೊತೆ ಮಾತಾಡುತ್ತಿದ್ದಿಯ, ಊಹುಂ ಅವಳಿಗೆ ಕೆಳಿಸಲೇ ಇಲ್ಲ
ಅವಳು ಮಾತಾಡುತ್ತದ್ದಾಳೆ, ನಗುತ್ತಲೇ ಇದ್ದಾಳೆ ಅವಳೆದುರು ಮಾತ್ರ. ಯಾರು ಇಲ್ಲ ಕರೆದುಕೊಂಡು ಬಂದು ಕೂರಿಸಿ ನೀರು ಕುಡಿಸಿ ಊಟಮಾಡಿಸಿದೆ, ಯಾಕೋ ತುಂಬ ಮಂಕಾಗಿದ್ದಾಳೆ ಆಗಗ ಭಯ ಪಡುತ್ತಿದ್ದಾಳೆ
ಏನಾದರೂ ನೊಡಿ ಹೆದರಿರಬೇಕು, ಸರಿ ಎರಡು ದಿನ ಬಿಟ್ಟರೆ ಸರಿ ಆಗತ್ತಾಳೆ ಅಂತ ಸುಮ್ಮನಾದೆ.
ನನ್ನ. ಒಬ್ಬಳೇ ಮಗಳು sslc ಮುಗಿಸಿ pu ಗೆ ಹೊಗತ್ತಿದ್ದಾಳೆ, ಗಲಗಲ ಮಾತಾಡುತ್ತಾ ಮನೆಯ ತುಂಬಾ ಓಡಾಡುತ್ತಿದ್ದ ಇವಳು ಹೀಗೆ ಆಚನಾಕಾಗಿ ಮಂಕು ಬಡಿದಂತೆ ಸುಮ್ಮನಿದ್ದರೆ ನೊಡಿ ಸಂಕಟವಾಗಿತ್ತಿತು.
ಎಷ್ಟೇ ಹೇಳಿದ್ದರೂ ಮಲಗುತ್ತಿಲ್ಲ ಬಲವಂತವಾಗಿ ಮಲಗಿಸಿದೆ ಇಡೀ ರಾತ್ರಿ ಕಣ್ಣ ಬಿಟ್ಟುಕೊಂಡು ಮಲಗಿರುತ್ತಾಳೆ, ಕಾಲೇಜಿಗೆ ಹೋಗುತ್ತಿಲ್ಲ, ನಾನು ಕೆಲಸಕ್ಕೆ ಹೊಗಿ ಬರೊ ಅಷ್ಟರಲ್ಲಿ ಮನೆ ತುಂಬಾ ಗಲೀಜು ಮಾಡಿ ಕೋಪದಿಂದ ಕೂಗಾಡುತ್ತಿದ್ದಾಳೆ ಆದರೆ ಅಲ್ಲಿ ಯಾರು ಇಲ್ಲ, ಅವಳನ್ನು ನಿಯಂತ್ರಿಸಲು ತುಂಬಾನೇ ಕಷ್ಟ ಆಯ್ತು.
ಯಾರಿಗಾದರೂ ಹೇಳೊಕೆ ಭಯ, ವಯಸ್ಸು ಹುಡುಗಿ ಮುಂದೆ ಮದುವೆ ಗಿದುವೆ ಅಂದರೆ ಕಷ್ಟ ಆಗುತ್ತೆ ಅನಿಸಿತು, ಸರಿ ಇನ್ನೆರಡು ದಿನ. ನೋಡೋಣ ಅನಕೊಂಡೆ
ಸತ್ತುಹೊಗಿರೊ ನಮ್ಮ ತ್ತೆ ಬಂದು ಅವಳನ್ನು ಕರೆಯುತ್ತಿದ್ದಾಳೆ ಅಂದಳು ಆ ಮಾತ್ತು ಕೇಳಿ ತುಂಬಾನೇ ಭಯ ಆಗಿತ್ತು ಸತ್ತ ಮೇಲೂ ನಮ್ಮನೂ ನೆಮ್ಮದಿಯಾಗಿರೊಕ್ಕೆ ಬಿಡತ್ತಿಲ್ಲ
ನನ್ನ. ಮಗಳ ಮೈ ಮೇಲೆ ಬಂದು ಕಾಡುತ್ತಿದ್ದಾಳೆ ಚೇನಾಗಿದ್ದ. ಮಗು ಹಿಗಾಗಿದು ನಮ್ಮತ್ತೆ ಯಿಂದನೆ. ಅಂತ ಯೊಚಿಸಿ ಗಾಳಿ ಆಂಜನೇಯನ ದೇವಸ್ಥಾನಕ್ಕೆ ಹೋಗಿ ತಾಯತ್ತು ಕಟ್ಟಿಸಿದ್ದೆ ಪೂಜೆಯನ್ನು ಮಾಡಿಸಿದೆ, ಮಗಳು ತುಂಬಾ ಸುಸ್ತಾದಂತೆ ಇದ್ದಳು,ಇವತ್ತು ದೈರ್ಯವಾಗಿ ಮನೆಗೆ ಬಂದವಿ, ಅವಳು ಕೂಡ ಗಲಾಟೆ ಮಾಡದೇ ನೆಮ್ಮದಿ ಯಾಗಿ ಮಲಗಿದ್ದಳು ಅಂತು ನಮ್ಮತೆ ಹೊದಳು ಇನೂ ಎಲ್ಲಾ ಸರಿ ಆಗುತ್ತದೆ, ತಾಯತು ಕೆಲಸ ಮನಾಡುತ್ತಿದೆ ಅಂತ ಖುಷಿಯಾಗಿ ಕೆಲಸಕ್ಕೆ ಹೊದೆ ಬರುವಾಗ ದಾರಿಯಲ್ಲಿ ನಿಮ್ಹಾನ್ಸ್ನಲಿ ಕೆಲಸ ಮಾಡುವ ಗೆಳತಿ ಸಿಕ್ಕಳು ತುಂಬಾ ಮಾತನಾಡಿದವಿ ಮಗಳ ಬಗ್ಗೆ ಹೇಳಿದೆ ತಾಯತೆಲ ಬೇಡ ನಮ್ಮ. ಆಸ್ಪತ್ರೆಗೆ ಕರಕೊಂಡು ಬಾ ಸರಿ ಆಗುತೇ ಅಂದಳು ಸರಿ ಅಂದೆ ಆದರೆ ಧೈಯ೯ ಬರಲಿಲ್ಲ. ,ಅವಳ ಭವಿಷ್ಯದ ನೆನಪಾಗಿ ಸುಮ್ಮನಾದೆ
ಮಾರನೆ ದಿನ ಮನೆಗೆ ಬರುವಷ್ಟರಲ್ಲಿ ಅಬ್ಬಾ ನೊಡೊಕ್ಕೆ ಆಗದ ಹಾಗೆ ಬಟ್ಟೆ ಯೆಲ್ಲ ಬಿಚ್ಚಿ ನಗ್ನವಾಗಿ ಕನ್ನಡಿಯೆದುರು ಕುತು ಅಲುತ್ತಿದ್ದಾಳೆ, ನನ್ನ ನೊಡಿ ಅಮ್ಮ. ಮುಖದ ತುಂಬಾ ಹುಣ್ಣು ,ಗಾಯ, ಕೀವು
ರಕ್ತ. ಸೊರುತ್ತಿದ್ದೆ ಎಂದಳು, ಅತಿ ಬಲವಂತವಾಗಿ ಬಟ್ಟೆ ಹಾಕಿ ಏನಿಲ್ಲೆಂದರೂ ಒಪ್ಪಲಿಲ್ಲ ಕೋಪ ತಡಿಯಲಾರದೆ ಚೇನಾಗಿ ಒಡೆದು ಮಲಗಿಸಿದೆ ಇಷ್ಷಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಧೈರ್ಯ ಬರಲಿಲ್ಲ ಹುಚ್ಚಿ ಅನೊ ಹಣೆಪಟ್ಟಿ ಬಿದ್ದರೆ ಮುಂದೆ ಅವಳ ಭವಿಷ್ಯ. ಹೇಗೆ ಅನಕೊಂಡೆ
ಒಂದು ವಾರ ರಜೆಹಾಕಿ ಅವಳನ್ನು ನೋಡಿಕೊಂಡೆ ಸ್ವಲ್ಪ. ಸಮಾದಾನವಾಗೆ ಇದ್ದಳು, ಮಂಕಾಗಿದ್ದರು ಸರಿ ಆಗತ್ತಾಲೆ ಅನಕೊಂಡು ಕೆಲಸಕ್ಕೆ ಹೊದೆ ಹೊಟ್ಟೆ ಪಾಡು ಹೊಗಲೇ ಬೇಕು,
Office ನಿಂದ ಮನೆಗೆ ಬರೋ ಅಷ್ಟರಲ್ಲಿ ಕತ್ತಿಯಿಂದ ಮುಖ, ಕೈ,ಕಾಲು, ಗಾಯ ಮಾಡಿಕೊಂಡು ಪ್ರಾಣಕ್ಕೆ ಹೊರಾಡುವ ಸ್ಥಿತಿಯಲ್ಲಿ ಬಿದ್ದಳು,ಪಕ್ಕದಲ್ಲೇ ಇದ್ದ ಆಸ್ಪತ್ರೆಗೆ ಸೇರಿಸಿದ್ದವಿ,ಒಂದೂ ವಾರದ ನಂತರ ಅವರೂ ನಿಮ್ಹಾನ್ಸ್ ಗೆ ಕರೆದುಕೊಂಡು ಹೊಗಲು ಹೇಳಿದ್ದರೂ, ನಾನು ಒಪ್ಪಲಿಲ್ಲ. ಹುಚ್ಚಾಸ್ಪತ್ರೆಗೆ ಮಾತ್ರ. ಬೇಡ ಸರ್ ಏನ ಟ್ರಿಟಮೆಂಟ್ ಬೇಕಾದರೂ ಇಲ್ಲೆ ಕೊಡಿ ಎಂದೆ ಅದಕ್ಕವರೂ "ಮೈ ಗಾದ ಗಾಯಗಳಿಗೆ ನಾವು ಔಷಧಿ ಹಾಕುತ್ತಿವಿ, ಅವಳ ಮನಸ್ಸಿಗಾದ ಗಾಯಕ್ಕೆ "ನಿಮ್ಹಾನ್ಸ್ ನಲ್ಲೆ ಚಿಕಿತ್ಸೆಯ ಕೊಡಿಸಲೇ ಬೇಕು ,ಜ್ವರ. ಕೆಮ್ಮು ನೆಗಡಿ ಬರೋ ಹಾಗೆನೆ ಮನಸ್ಸುಗೂ ಜ್ವರ ಬರುತ್ತದೆ "ಜನ ಏನೂ ಅನುತ್ತಾರೊ ಅನೊ ಯೊಚನೆಯ ಬಿಡಿ ಇಲ್ಲಿ ನಿಮ್ಮ ಮಗಳ ಪ್ರಾಣ ಮುಖ್ಯ.ಈಗ ನೀವು ಮನೆಗೆ ಕರೆದು ಕೊಂಡು ಹೋದರೂ ಮತ್ತೆ ಅದೇ ತರಹ ಮಾಡಿಕೊಳುತ್ತಾಳೆ ಏಂದು ಖಚಿತವಾಗಿ ಹೇಳಿದ ಮೇಲೆ ಅಂಜಿಕೆಯಿಂದನೇ ಆಸ್ಪತ್ರೆಗೆ ಕರೆದುಕೊಂಡು ಬಂದೆ ಅಲ್ಲಿ ನಮ್ಮಂತಹವರು ತುಂಬಾ ಜನ ಇದ್ದರೂ, ಅಂದರೆ ಇದು ಸಾಮಾನ್ಯ. ಖಾಯಿಲೆನೆ ಅನಕೊಂಡೆ, ಆದರೂ ಎಷ್ಟು ಖಚು೯ ಆಗುತೊ ಬಡವಳು, ವಿದವೆ,ಕೂಲಿ ಕೆಲಸ ಮಾಡುವ ನಾನು ಲಕ್ಷ ಲಕ್ಷ ಎಲ್ಲಿಂದ. ತರಲಿ ಅನಕೊಂಡೆ,ಕ್ಯೂನಲ್ಲಿದಾಗ ನಮ್ಮ. ಹೆಸರನ್ನು ಕರೆದರು ಹೊದವಿ ಕುತ್ತಿರುವ ಹುಡುಗ ನೆ ಡಾಕ್ಟರ್ ಅಂತ ಗೊತಾಯಿತು ಅವನು ಕೆಳಿದು ನಮಗೆ ಗೊತ್ತಾಗಲಿಲ್ಲ. ನಮ್ಮ. ಭಾಷೆ ಅವನಿಗೆ ಗೊತಗಲಿಲ್ಲ
ಫೋನ್ ಮಾಡಿ ಯಾರನೊ ಕರೆದರೂ
ನಗುಮೊಗದ ಸ್ನೇಹ ಸೂಸುವ ಕಂಗಳ ಇನೊಬ್ಬ ಡಾಕ್ಟರ್ ಬಂದರೊ ಚಿಕ್ಕ. ವಯಸ್ಸಿನ ಈ ಹುಡುಗ ನಮಗೆ ಹೇಗೆ ಸಹಾಯ ಮಾಡುತ್ತಾರೆ ಅಂದುಕೊಂಡವಿ ಬರುತ್ತಿದ್ದ. ಹಾಗೆನೆ ಅಮ್ಮ. ನನ್ನ. ಹೆಸರೂ "ಡಾ ಉಮೇಶ್ " ತಿಂಡಿ ಎಲ್ಲಾ ಆಯ್ತ ಅಂತ ವಿಚಾರಿಸಿದಾಗ ನೆಮ್ಮದಿ ಅನಿಸಿತು ಕೇಳಿದ ರೀತಿಗೆ ಸಂತೋಷ, ದುಃಖ ಎರಡೂ ಒಟ್ಟಿಗೆ ಆಯ್ತು ಎಲ್ಲವನ್ನೂ ವಿವರವಾಗಿ ಹೇಳಿದೆ, ಭಯ ಬೇಡ ಸ್ವಲ್ಪ. ದೀನ ಇಲ್ಲೆ ಇರಲಿ ಎಂದರೂ,ಮಾತ್ರೆ, ಚಿಕಿತ್ಸೆ ಎಲ್ಲಾ ಸರಿಯಾಗಿ ಆಗುತ್ತಿತು ಈಗ ನನಗೆ ನಂಬಿಕೆ ಬರುತ್ತಿತ್ತು ನನ್ನ ಮಗಳು ಸರಿ ಆಗುತ್ತಾಳೆ ಎಂದು, ಮೊದಲಿಗಿಂತ ಶಾಂತಿಯಿಂದ ಇರುತ್ತಿದ್ದಾಳೆ, ನಮ್ಮ. ದೇವರಂತ ಡಾಕ್ಟರ್ ಉಮೇಶ್ ದಿನಕ್ಕೆ ಎರಡು ಬಾರಿ ಬರುತ್ತಿದ್ದರೂ ಹಾಗೆ ಬಂದಾಗ ಬಿಲ್ ಬಗ್ಗೆ ಕೇಳಿದೆ ನನ್ನ ವಿಷಯವನ್ನು ಹೇಳಿದೆ ಸಂಬಂಧಿಸಿದ ಪತ್ರಗಳನ್ನು ಕೇಳಿದ್ದರೂ ಎಲ್ಲವೂ ತಂದು ಕೊಟ್ಟೆ ಬಿಲ್ ಹಣವನ್ನು ಕಡಿಮೆಯಲ್ಲಿ ಮಾಡಿಕೊಟ್ಟರು ಈಗ ತುಂಬಾನೆ ಧೈರ್ಯ ದಿಂದ ಚಿಕಿತ್ಸೆ ಕೊಡಿಸುತ್ತಿದ್ದೆನೆ, ಅವಳ "ಕಾಯಿಲೆ ಮೆದುಳಿನ ನರ ದೌಬ೯ಲ್ಯ " ಎಂದರೂ ಅದಕ್ಕೆ "ಸ್ಕಿಝೊಪ್ರೋನಿಯ" ಎಂದರೂ ಮಾತ್ರೆಗಳನ್ನೂ ಕ್ರಮ ತಪದೆ ಕೊಡಲು ಹೇಳಿದ್ದರೂ ,ಸಾಕಷ್ಟು, ನಿದ್ರೆ, ವಿಶ್ರಾಂತಿ, ತೆಗೆದುಕೊಳುವಂತೆ ನೊಡಿಕೊಳುತ್ತಿದೆ ನಮ್ಮ. ಡಾಕ್ಟರ್ ಉಮೇಶ್ ಅಂತು ತಂಬಾನೆ ಸಹನೆಯಿಂದ ನೊಡಿಕೊಳುತ್ತಿದ್ದರೂ ಅವಳಾಡುವ ಮಾತು ಹಟಕ್ಕೆ ನನ್ನಗೆ ಕೊಪ ಬರುತ್ತಿತು ನಮ್ಮ. ಡಾಕ್ಟರ್ ಗೆ ಮಾತ್ರ. ಕೊಪವೆ ಬರುತಿರಲಿಲ್ಲ ತುಂಬಾ ಶಾಂತಿ ಸಹನೆಯಿಂದ. ನಡೆದುಕೊಳುತ್ತಿದ್ದರೂ, ಅವಳ ಕೆಲಸವನ್ನೂ ಅವಳೆ ಸ್ವತಹ ಮಾಡಿಕೊಳುವಂತೆ ಪ್ರೋತ್ಸಾಹಿಸುತ್ತಿದ್ದರೂ ,ಹಾಗೆಯೆ ಸ್ವಲ್ಪ ದಿನಗಳ ನಂತರ ಡಿಸ್ಚಾಜ೯ ಮಾಡಿದ್ದರು ಮತ್ತೆ ಮರುಕಲಿಸುತ್ತ ಎಂದು ಗಮನಿಸುತಾ ಚಿಕಿತ್ಸೆ ಮುಂದುವರಿಸಲು ಹೇಳಿದರೂ ಕ್ರಮೇಣ ನನ್ನ. ಮಗಳು ಸರಿ ಆದಲೂ ನಿಮ್ಹಾನ್ಸ್ ಎಂದರೆ ಭಯ ಪಡುತಿದ್ದ ನಾನು ಇಂತಹ ಘಟಣೆ ಗಳನ್ನೂ ಎಲಿಯಾದರೂ ನೊಡಿದರೆ ನಿಮ್ಹಾನ್ಸಿಗೆ ಕರೆದುಕೊಂಡು ಹೊಗಲು ಹೆಳುತ್ತೆನೆ ಈ ಆಸ್ಪತ್ರೆಯ ಋಣವನ್ನು ನಾನು ಎನೂ ಮಾಡಿದ್ದರೂ ತಿರಿಸಲಾಗದು.....
ಇಂತಹ. ಘಟನೆಗಳು ನಮ್ಮ. ಸಮಾಜದಲ್ಲಿ ತುಂಬಾನೆ ನಡೆಯುತ್ತಿರುತ್ತವೆ, ವಿಙ್ಞಾಣ ಎಷ್ಟೇ ಮುಂದುವರೆದರೂ ಈಗಲೂ ತಾಯತು ದೇವಸ್ಥಾನದ ಮೊರೆ ಹೊಗುವವರ ಸಂಖ್ಯೆ ಕಡಿಮೆ ಆಗಲಿಲ್ಲ ನಿಮ್ಹಾನ್ಸ್ ನಲಿ ಕೆಲಸ ಮಾಡುವ ನಾನು
ಈ ಸ್ಕಿಝೊಪ್ರೋನಿಯದ ಬಗ್ಗೆ ಕುತುಹಲದಿಂದ ತಿಳಿದುಕೊಂಡಿದೆನೆ ನನ್ನ. ಸಮಾಜದ ಸುತ್ತ ಮುತ್ತ. ಆಗುವ ಇಂತಹ ಘಟನೆಗಳಿಗೆ ಸ್ಪಂದಿಸುತ ಚಿಕಿತ್ಸೆ ಗೆ ಪ್ರೇರೇಪಿಸುತ್ತ. ನನ್ನ. ಪರಿದಿಯೊಳಗೆ ಕೈಲಾದ ಸಹಯವನ್ನು ಮಾಡುತ್ತಿದ್ದೆನೆ
""ಹುಚ್ಚು ಖಂಡಿತ ಹುಚ್ಚಲ ಅದೊಂದು ಮಾನಸಿಕ ಜ್ವರ, ಮಾಮುಲಿ ಜ್ವರಕ್ಕೆ ಹೇಗೆ ಡೆಗ್ಯೂ, ಟೈಪಾಯಿಡ್, ಅಂತ ಹೆಸರೊದಿಯೊ ಹಾಗೆ ನಮ್ಮ. ಈ ಮಾನಸಿಕ ಜ್ವರಕ್ಕೆ ಸ್ಕಿಝೊಪ್ರೋನಿಯ"" ಎನುತ್ತಾರೆ ಚಿಕಿತ್ಸೆ ತೆಗೆದುಕೊಂಡರೆ ಸರಿಯಾಗುತ್ತದೆ........
..........
Ashadeepa
(Meena .s)
34 yrs
Hospital. Asst
Sakalawara nimhans
Ph 9845433443
asha.deepa82@gmail.com
ಭಾನುವಾರ, ಅಕ್ಟೋಬರ್ 26, 2014
ಸ್ಕಿಝೋಪ್ರೋನಿಯ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ